ಗುರುವಾಯನಕೆರೆ: ತೀರಾ ಹದಗೆಟ್ಟ ರಸ್ತೆ, ಸ್ಥಳೀಯರೊಂದಿಗೆ ಜೊತೆಯಾಗಿ ರಿಪೇರಿ ಮಾಡಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು.
ಗುರುವಾಯನಕೆರೆ, ಅಗಸ್ಟ್ 23: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಮಡಂತ್ಯಾರು ಘಟಕ ಹಾಗೂ ಸ್ಥಳೀಯರಿಂದ ರಸ್ತೆ ರಿಪೇರಿ ಸೇವಾಕಾರ್ಯ ನಡೆಸಲಾಯಿತು.
ಸೋಣಂದೂರು ಗ್ರಾಮದ ಪಣಕಜೆ ಬಳ್ಳಮಂಜದ ಶ್ರೀ ಅನಂತೇಶ್ವರ ದೇವಾಲಯವನ್ನು ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿತ್ತು.
ಇದನ್ನು ಗಮನಿಸಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ತಂಡ ಸಂಯೋಜಕರಾದ ಶ್ರೀ ಸತೀಶ್ ಆಚಾರ್ಯ ಅವರ ಪ್ರೇರಣೆಯಿಂದ ರಸ್ತೆ ರಿಪೇರಿ ಕೆಲಸ ಮಾಡಿದೆ.
ಸ್ಥಳೀಯರಾದ ಶ್ರೀ ಶಶೀಧರ್ ಭಟ್, ಶ್ರೀ ಶಾಂತಾರಾಮ ಪ್ರಭು, ಶ್ರೀ ಮೋಹನ್ ಪ್ರಭು, ಶ್ರೀ ಹಿತೇಶ್, ಶ್ರೀ ಯೋಗೀಶ್, ಶ್ರೀ ಹರೀಶ್, ಶ್ರೀ ಅನಿಲ್ ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಮಮತಾ ಶೆಟ್ಟಿ ಅವರು ಗ್ರಾಮ ಪಂಚಾಯತ್ ನಿಂದ ರಸ್ತೆ ರಿಪೇರಿಗೆ ಅಗತ್ಯವಿರುವ ಜಲ್ಲಿ ಮತ್ತಿತರ ವಸ್ತುಗಳನ್ನು ಪೂರೈಸುವಂತೆ ನೋಡಿಕೊಂಡಿರುತ್ತಾರೆ.
Comments
Post a Comment