ಬೆಳ್ತಂಗಡಿ: ವಿವಿಧ ಸಂಘಟನೆಗಳ ನೆರವಿನಿಂದ ರಸ್ತೆ ರಿಪೇರಿ ಸೇವಾಕಾರ್ಯ..

ಬೆಳ್ತಂಗಡಿ, ಅಗಸ್ಟ್ 23: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ, ವಿ.ಹಿಂ.ಪ.ಬಜರಂಗದಳ ಕಲ್ಮಂಜ, ಸಾರ್ವಜನಿಕ ಗಣೇಶೋತ್ಸವ ಸಮಿತಿ , 
ಗ್ರಾ. ಪಂ. ಕಲ್ಮಂಜ ಹಾಗೂ ಊರವರ ಸಹಭಾಗಿತ್ವದಲ್ಲಿ ಕಲ್ಮಂಜ ಗ್ರಾಮದ ಸಿದ್ದಬೈಲು ಪರಾರಿ ವಲಯದ  ರಸ್ತೆ ಬದಿಯಲ್ಲಿ ಶ್ರಮದಾನ ನಡೆಸಲಾಯಿತು.

 ರಸ್ತೆಯ ಬದಿಯಲ್ಲಿನ ಪ್ಲಾಸ್ಟಿಕ್ ಕಸಗಳನ್ನು ತೆಗೆಯುವುದು, ಅನಗತ್ಯ ಗಿಡ ಹಾಗೂ ಪೊದೆಗಳನ್ನು ತೆಗೆಯುವ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಕೊರೊನಾ ಭಯದ ನಡುವೆ ಬಿಡುವಿನ ವೇಳೆ ಈ ಯುವಕರ ತಂಡ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಸೇವಾಕಾರ್ಯ ನಡೆಸಿತು. 

ಶ್ರಮದಾನದಲ್ಲಿ ಅನಿಲ್,  ಉಮೇಶ್,  ಸಂದೀಪ್. S, ಮುರಳಿ, ಸಾಂತಪ್ಪ, ಪ್ರವೀಣ್,  ಲೋಕೇಶ್,  ವಿನೋದ್ ರಾಜ್,  ಪ್ರಶಾಂತ್, ನಾಗೇಶ್, ಪುರುಷೋತ್ತಮ, ಸುಮಂತ್, ಧನ್ಯಕುಮಾರ್, ಅಭಿಷೇಕ್, ದೀಕ್ಷಿತ್,  ಸತ್ಯಪ್ರಸಾದ್,  ದೀಪಕ್ , ನವೀನ್,  ಸಂದೇಶ್ ಮತ್ತು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಮಧುರಾಜ್ ಶ್ರಮದಾನದಲ್ಲಿ ಭಾಗವಹಿಸಿದ್ದರು.

Comments