ಹೊನ್ನಾವರ: ಶ್ರೀ ಧರ್ಮಸ್ಥಳ ಸೇವಾ ಘಟಕದಿಂದ ಸಾರ್ವಜನಿಕರಿಗೆ ಹಣ್ಣಿನ ಗಿಡ ವಿತರಣೆ..

ಹೊನ್ನಾವರ, ಅಗಸ್ಟ್ 29: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದಿಂದ ಸಾರ್ವಜನಿಕರಿಗೆ ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.
ವಿಪತ್ತು ನಿರ್ವಹಣೆ ಸಂಯೋಜಕರಾದ ಮಾದೇವ ನಾಯ್ಕ, ಸ್ವಯಂಸೇವಕರಾದ  ಮಾರುತಿ ನಾಯ್ಕ ಇವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆಸಿದ್ದು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಸಹಕಾರ ನೀಡಿದೆ.

ವಿವಿಧ ಹಣ್ಣಿನ ಗಿಡಗಳನ್ನು ಗ್ರಾಮದ ಹದಿನೈದು ಮಂದಿಗೆ ವಿತರಣೆ ಮಾಡಲಾಗಿದೆ.

Comments