ಗುರುವಾಯನಕೆರೆ: ಗುಂಡಿ ಬಿದ್ದ ರಸ್ತೆಗಳು, ಸರಿಪಡಿಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಗುರುವಾಯನಕೆರೆ, ಅಗಸ್ಟ್ 23: ಅಳದಂಗಡಿ ಗ್ರಾಮ ಪಂಚಾಯತಿ  ವ್ಯಾಪ್ತಿಯ ಸುಲ್ಕೇರಿ ಮೊಗರು  ಗ್ರಾಮದ ಬೊಳ್ಳಾಜೆ ಎಂಬಲ್ಲಿ ಶ್ರೀ ಕೃಷ್ಣಪ್ಪ ಪೂಜಾರಿ ಅವರ ಮನೆಯ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಮಧ್ಯದಲ್ಲಿ ಮಳೆಗಾಲದಲ್ಲಿ ದೊಡ್ಡ ಹೊಂಡ ಬಿದ್ದು ನೀರು ತುಂಬಿ ವಾಹನ ಸಂಚಾರಕ್ಕೆ ಕಷ್ಟವಾಗಿತ್ತು.

ಅಳದಂಗಡಿಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ  ಶ್ರೀ ಶ್ರೀಕಾಂತ್,  ಶ್ರೀ ಪ್ರಕಾಶ್ ಕೊಲ್ಲಂಗೆ ಹಾಗೂ ಶ್ರೀ ಆಶಿಕ್ ಶೆಟ್ಟಿ ಅವರು  ಶ್ರಮದಾನದ ಮೂಲಕ ಒಂದು   ಟಿಪ್ಪರ್   ಚರಲು ಹಾಕಿ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗುವಂತೆ  ಮಾಡಿರುತ್ತಾರೆ.
 ಶ್ರಮದಾನದಲ್ಲಿ ಒಕ್ಕೂಟದ ಸ್ವಚ್ಛತಾ ಸೇನಾನಿ  ಶ್ರೀ ಶಿವಪ್ಪ ಪೂಜಾರಿಯವರು ಮತ್ತು ಶ್ರೀರಾಜೇಂದ್ರ ಪಟ್ಲ ಹೊಸ ಮನೆ ಇವರು ಸಹಕರಿಸಿದರು.

ಕೆಲಸಕ್ಕೆ ಬೇಕಾದ  ಚರಲು ಒಂದು ಟಿಪ್ಪರ್ ಶ್ರೀ ರಾಜೇಂದ್ರ  ಪಟ್ಲ ಹೊಸ ಮನೆ ಇವರು ಒದಗಿಸಿದರು. ಹಾಗೂ ಶ್ರಮದಾನದಲ್ಲಿ  ಪಾಲ್ಗೊಂಡರು.  ಬೆಳಿಗ್ಗೆ ೮.೪೫ ರಿಂದ ೧೧ ೪೫ ರವರೆಗೆ ಕೆಲಸವನ್ನು ಮಾಡಲಾಯಿತು.   ಶ್ರೀ ಕೃಷ್ಣಪ್ಪ  ಪೂಜಾರಿಯವರು ಮತ್ತು ಪ್ರಕಾಶ್ ಅವರು ಉಪಹಾರದ ವ್ಯವಸ್ಥೆ ಮಾಡಿದರು.

ವರದಿ:
ಶ್ರೀಕಾಂತ್ ಪಟವರ್ಧನ್
ವಿಪತ್ತು ನಿರ್ವಹಣೆ ಕಾರ್ಯಕ್ರಮದ ಸಂಯೋಜಕರು. ಅಳದಂಗಡಿ.

Comments