ಗುರುವಾಯನಕೆರೆ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಮಾಸಿಕ ಶ್ರಮದಾನ ಕಾರ್ಯಕ್ರಮ
ಗುರುವಾಯನಕೆರೆ, ಅಗಸ್ಟ್ 30: ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸೇವಾ ಪಡೆ ಗುರುವಾಯನಕೆರೆ ಘಟಕದ ಮಾಸಿಕ ಶ್ರಮದಾನ ಇಂದು ನಡೆಯಿತು.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಶ್ರೀ ಅಲೆಕ್ಸ್ ಇವರ ಮನೆಯು ಕುಸಿಯುವ ಭೀತಿಯಲ್ಲಿದ್ದು ಇವರು ಹೊಸದಾಗಿ ಮನೆ ಕಟ್ಟಲು ಅಶಕ್ತವಾದ್ದರಿಂದ ಇವರಿಗೆ ಸಾರ್ವಜನಿಕರ ಹಾಗೂ ರೋಟರಿ ಕ್ಲಬ್ ಮತ್ತು ದಾನಿಗಳ ಮೂಲಕ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದು ಈ ಪ್ರಯುಕ್ತ ಘಟಕದ ಮಾಸಿಕ ಸಹಮಿಲನ ಶ್ರಮದಾನವನ್ನು ಇವರ ಪಂಚಾಂಗದ ಕೆಲಸ ಮಾಡುವ ಮೂಲಕ ನೆರವೇರಿಸಲಾಗಿದೆ.
ಶ್ರಮದಾನದ ನಂತರ ಶ್ರೀ ಜೋಸೆಫ್ ಎಂ. ಎಂ ಜಲತಜ್ಞರು ಹಾಗೂ ಪ್ರಾಂಶುಪಾಲರು ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು ಇವರಿಂದ ಜಲಾನಯನ ಕುರಿತಂತೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಸ್ವಯಂಸೇವಕರು ಇದುವರೆಗೆ ನಿರ್ವಹಿಸಿದ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿ, ಮುಂದೆ ನಿರ್ವಹಿಸಬಹುದಾದ ಸೇವಾಕಾರ್ಯಗಳಿಗೆ ಪ್ರೇರಣೆ ನೀಡಿದರು.
ಗುರುವಾಯನಕೆರೆ ಘಟಕದ ಒಟ್ಟು 30 ಸ್ವಯಂಸೇವಕರು ಭಾಗವಹಿಸಿದ್ದರು. ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ವಲಯ ಮೇಲ್ವಿಚಾರಕ ಶ್ರೀ ಆದಿತ್ಯ ಉಪಸ್ಥಿತರಿದ್ದರು.
ಅಲೆಕ್ಸ್ ಅವರ ಮನೆಯ ವಠಾರ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಒಂದು ಹೆಬ್ಬಾವು ಮತ್ತು ಕನ್ನಡಿ ಹಾವು ಸಿಕ್ಕಿದ್ದು ಅದನ್ನು ತಂಡದ ಉರಗ ತಜ್ಞರು ಹಿಡಿದರು. ನಂತರ ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಅರಣ್ಯ ಪಾಲಕರ ಮೂಲಕ ಬಿಡಲಾಗಿದೆ.
Comments
Post a Comment