ಅಥಣಿ: ವಿಪತ್ತು ನಿರ್ವಹಣೆ ಸೇವಾ ಘಟಕದ ಉದ್ಘಾಟನೆ ಮತ್ತು ವಿಪತ್ತು ನಿರ್ವಹಣಾ ಪಡೆಯ ಮೂಲಕ ತರಬೇತಿ
ಅಥಣಿ, ಸಪ್ಟೆಂಬರ್ 14: ತಾಲೂಕಿನ ಮುರಗುಂಡಿ ಗ್ರಾಮದ ಮುರುಸಿದ್ದೇಶ್ವರ ದೇವಸ್ಥಾನದಲ್ಲಿ, ವಿಪತ್ತು ನಿರ್ವಹಣಾ ಸ್ವಯಂಸೇವಕರ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಆಶಯ ನುಡಿಯನ್ನು ವಿಪತ್ತು ನಿರ್ವಹಣೆ ಮತ್ತು ಜನಜಾಗ್ರತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ ವಿನ್ಸೆಂಟ್ ಪಾಯಸ್ ರವರು ಮಾರ್ಗದರ್ಶನ ನೀಡಿದರು.
ತರಬೇತಿಯಲ್ಲಿ ಒಟ್ಟು 102 ಸ್ವಯಂಸೇವಕರು ಮತ್ತು ಸಂಯೋಜಕರು ಪಾಲ್ಗೊಂಡು ತರಬೇತಿ ಪಡೆದುಕೊಂಡಿರುತ್ತಾರೆ.
ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ತಾಲೂಕಿನ ತಹಶೀಲ್ದಾರರಾದ ಶ್ರೀಯುತ ದುಂಡಪ್ಪ ಕೋಮಾರ, ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀಯುತ ಕುಮಾರ ಹಾಡಕರ್, ಜಿಲ್ಲಾ ಜನಜಾಗ್ರತಿ ವೇದಿಕೆ ಉಪಾಧ್ಯಕ್ಷರಾದ ಸಂಜಯ ನಾಡಗೌಡರ್, ಮಾನ್ಯ ಜಿಲ್ಲಾ ನಿರ್ದೇಶಕರಾದ ಕೃಷ್ಣ, ಟಿ ರವರು, ತಾಲೂಕು ಪಂಚಾಯತ ಸದಸ್ಯರಾದ ಮಂಗಲ, ಪಂಚಾಯತ ಅಧ್ಯಕ್ಷರಾದ ಶೋಭಾ ರವರು ಪಾಲ್ಗೊಂಡಿದ್ದರು.
NDRD ಟೀಮ್ ಮುಖ್ಯಸ್ಥರಾದ ಹರೀಶರವರ ತಂಡ ಸ್ವಯಂಸೇವಕರಿಗೆ, ಸೇವೆಗೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ನೀಡಿರುತ್ತಾರೆ. ಹಾಗೂ ಸ್ವಯಂಸೇವಕರನ್ನು ಮತ್ತು ಸಂಯೋಜಕರನ್ನು ಉದ್ದೇಶಿಸಿ, ಗೌರವಾನ್ವಿತ ಮುಖ್ಯ ಕಾರ್ಯನಿರ್ವಹಾಧಿಕಾರಿಗಳಾದ ಶ್ರೀಯುತ ಡಾ, ಎಲ್,ಎಚ್, ಮಂಜುನಾಥ್ ರವರು ಕಾರ್ಯಕ್ರಮದ ಉದ್ದೇಶ, ಸ್ವಯಂಸೇವಕರ ಸೇವಾಕರ್ತವ್ಯ, ಇದರಿಂದಾಗುವ ಪ್ರಯೋಜನವನ್ನು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ತಿಳಿಸುವುದರ ಮೂಲಕ ಎಲ್ಲರಲ್ಲೂ ಹೊಸ ಹುರುಪನ್ನು ಮೂಡಿಸಿರುತ್ತಾರೆ.
ಎನ್.ಡಿ.ಆರ್ ಎಫ್ ಪಡೆಯು ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನೀಡಿದೆ.
Comments
Post a Comment