ಬೆಳ್ತಂಗಡಿ: ವಿವಿಧ ಸಂಘಟನೆಗಳ ಸ್ವಚ್ಚತಾ ಶ್ರಮದಾನ
ಬೆಳ್ತಂಗಡಿ, ಸಪ್ಟೆಂಬರ್ 15 : ತಮ್ಮ ಸುತ್ತಮುತ್ತಲಿನ ಪರಿಸರ, ರಸ್ತೆ ಬದಿಯ ಕಸ ಕಡ್ಡಿಗಳು, ಬೃಹತ್ತಾದ ಪೊದೆಗಳು ಬೆಳೆದಿರುವುದನ್ನು ಮನಗಂಡ ತಾಲೂಕಿನ ಕಲ್ಮಂಜ ಗ್ರಾಮದ ವಿವಿಧ ಸಂಘಟನೆಗಳ ಸದಸ್ಯರು ಇಂದು ಸ್ವಚ್ಚತಾ ಕಾರ್ಯ ನಡೆಸಿದರು.
ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ, ವಿ.ಹಿಂ.ಪ.ಭಜರಂಗದಳ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಲ್ಮಂಜ ಹಾಗೂ ಊರಿನವರು ಒಟ್ಟು ಸೇರಿ ಶ್ರಮದಾನ ನಡೆಸಿದರು.
ತಂಡದ ಸದಸ್ಯರು ಉಲ್ಲಾಯ ಉಲ್ಲಾಳ್ತಿ ದ್ಯೆವಸ್ಥಾನ ಪರಾರಿ ಮಜಲು ಪ್ರದೇಶದಲ್ಲಿ ಬೃಹತ್ತಾಗಿ ಬೆಳೆದಿದ್ದ ಪೊದೆಗಳನ್ನು ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ಕಸಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯ ನಡೆಸಿದರು.
ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಮಧುರಾಜ್, ಅನಿಲ್, ಉಮೇಶ್, ಸಂದೀಪ್.S, ಧನಂಜಯ, ಜಯಾನಂದ,ಮುರಳಿ, ಪ್ರವೀಣ್, ಪುರುಷೋತ್ತಮ , ದಾಮೋದರ, ಜಯಂತ್ ರಾವ್, ನಯನ್, ಸುಮಂತ್, ಸತ್ಯಪ್ರಸಾದ್ ಭಾಗವಹಿಸಿದ್ದರು.
Comments
Post a Comment