ಗುರುವಾಯನಕೆರೆ: ಸಾಮಾಜಿಕ ಪ್ರಜ್ಞೆ ಮೆರೆದ ವಿಪತ್ತು ನಿರ್ವಹಣೆ ಸ್ವಯಂಸೇವಕ ಅರುಣ್ ಹೆಗ್ಡೆ.. ಪ್ರಶಂಸೆ ವ್ಯಕ್ತಪಡಿಸಿದ ಸ್ಥಳೀಯರು.

ಗುರುವಾಯನಕೆರೆ, ಸಪ್ಟೆಂಬರ್ 17: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಗುರುವಾಯನಕೆರೆ ಹೊಸಂಗಡಿ ವಲಯದ ಸ್ವಯಂಸೇವಕರಾದ ಅರುಣ್ ಹೆಗ್ಡೆ ಇವರು ತಮ್ಮ ಗ್ರಾಮದ 17 ಬಡ ಕುಟುಂಬ ಗಳಿಗೆ 94c ಅಡಿಯಲ್ಲಿ ಜಾಗದ ಹಕ್ಕು ಪತ್ರ ಮಾಡಿಸಿ ಕೊಟ್ಟಿರುತ್ತಾರೆ.

ಅಲ್ಲದೇ  ಕಳೆದ ಎರಡು ಮೂರು ವರ್ಷಗಳಿಂದ ಮಂಜೂರಾಗದೇ ಇದ್ದ ಉದ್ಯೋಗ ಖಾತರಿ ಯೋಜನೆಯಡಿ ಅನುದಾನವನ್ನು ಸ್ಥಳೀಯ ಪರಿಸರದ ಎರಡು ಕುಟುಂಬಗಳಿಗೆ ತೆಗೆಸಿ ಕೊಟ್ಟಿರುತ್ತಾರೆ.
ಸ್ಥಳೀಯವಾಗಿ ಅಯುಶ್ಮಾನ್ ಕಾರ್ಡ್ ಹಾಗೂ ಮತದಾರ ಗುರುತು ಚೀಟಿ ಮಾಡಿಕೊಡುವಲ್ಲಿ ಅರುಣ್ ಹೆಗ್ಡೆ ಮುತುವರ್ಜಿ ವಹಿಸಿದ್ದು ಈ ಬಗ್ಗೆ  ಫಲಾನುಭವಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು. 

ಕರಿಮಣೆಳು ಪರಿಸರದಲ್ಲಿ ಕಳೆದ ಭಾರಿ ಮಳೆಗೆ ಕಾಲು ಸಂಕ ಕುಸಿದಿದ್ದು ಇದನ್ನು ಸ್ಥಳೀಯ ಪಂಚಾಯತ್  ಗಮನಕ್ಕೆ ತಂದು ಪಂಚಾಯತ್ ಮೂಲಕ ಕಾಲು ಸಂಕ ಮಾಡಿಸುವಲ್ಲಿ ಸಫಲತೆ ಪಡೆದಿದ್ದಾರೆ. ಈ ಎಲ್ಲಾ ಸೇವೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Comments

Post a Comment