ಗುರುವಾಯನಕೆರೆ: ಚರಂಡಿಯನ್ನು ಸ್ವಚ್ಛಗೊಳಿಸಿ ನೀರಿನ ಹರಿವು ಸರಾಗ ಗೊಳಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು..

ಗುರುವಾಯನಕೆರೆ, ಸಪ್ಟೆಂಬರ್ 19: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇಂದು ಚರಂಡಿಯ ಸ್ವಚ್ಚತಾ ಕಾರ್ಯ ನಡೆಸಿದರು.
ಪಿಲ್ಯದ ಮಾರಿಗುಡಿ ಸಮೀಪ ಇರುವ ಚರಂಡಿಯಲ್ಲಿ ತುಂಬಿದ್ದ ಕಸವನ್ನು ಎತ್ತಿ ಹಾಕಲಾಗಿದೆ. ಅತಿಯಾದ ಮಳೆಯಿಂದ ಚರಂಡಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಚರಂಡಿಯ ಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ತುಂಬಿಕೊಂಡಿರುವುದರಿಂದ  ನೀರು ಸರಾಗ ಹರಿದು ಹೋಗಲು ತೊಡಕಾಗಿತ್ತು. ಇದನ್ನು ಗಮನಿಸಿದ  ವಿಪತ್ತು ನಿರ್ವಹಣೆ ಅಳದಂಗಡಿ ವಲಯ ಕಾರ್ಯಕರ್ತರಾದ ಶ್ರೀ ಸಂಜಯ್ ಶ್ರೀ ವಿಲಾಸ್ ಮತ್ತು ಶುಭಕರ ಪೂಜಾರಿಯವರು ಚರಂಡಿಯನ್ನು ಸ್ವಚ್ಛಗೊಳಿಸುವ ಸೇವಾಕಾರ್ಯ ನಡೆಸಿದರು.
ಸ್ವಯಂಸೇವಕರ ಈ ಸೇವಾಕಾರ್ಯ ಸರ್ವರ ಮೆಚ್ಚುಗೆಗೆ ಕಾರಣವಾಗಿದೆ. 

Comments

  1. ನಿಮ್ಮ ನಿಸ್ವಾರ್ಥ ಸೇವೆ ಸದಾ ಹೀಗೆ ಸಾಗುತ್ತಿರಲಿ

    ReplyDelete

Post a Comment