ಕುಮಟಾ: ಇಂದು ಒಂದೇ ದಿನ ಐದು ಹಾವುಗಳ ಕಾರ್ಯಾಚರಣೆ; ಸುರಕ್ಷಿತವಾಗಿ ಅರಣ್ಯ ಸೇರಿದ ಉರಗಗಳು. ವಿಪತ್ತು ನಿರ್ವಹಣಾ ಸ್ವಯಂಸೇವಕ ಅಶೋಕ್ ನಾಯ್ಕ್ ಅವರಿಂದ ಸಾಹಸ.
ಕುಮಟಾ, ಸಪ್ಟೆಂಬರ್ 30: ಐದು ಸಾವಿರಕ್ಕೂ ಅಧಿಕ ಹಾವು ಹಿಡಿದ ಖ್ಯಾತಿ ಹೊಂದಿರುವ ಉರಗ ತಜ್ಞ ಅಶೋಕ್ ನಾಯ್ಕ ಮೊನ್ನೆ ಕಾಳಿಂಗ ಸರ್ಪ ವೊಂದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.
ನಾವು, ನೀವು ಅಚ್ಚರಿಗೊಳ್ಳುವ ಸುದ್ದಿ ಇನ್ನೊಂದಿದೆ. ಅಶೋಕ್ ಅವರು ಇಂದು ಒಂದೇ ದಿನ ಹಿಡಿದ ಹಾವಿನ ಸಂಖ್ಯೆ ಐದು.
ಹಾವು ಕುಮಟಾ ತಾಲ್ಲೂಕಿನ ಯಾವುದೇ ಮೂಲೆಯಲ್ಲಿ ಬಂದರೂ ಅದಕ್ಕೆ ಕಾಡಿನ ದಾರಿ ತೋರಿಸಲು ಇರುವ ಏಕೈಕ ದಾರಿ ಎಂದರೆ ಅಶೋಕ ನಾಯ್ಕ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದು ಇಂದಿನ ಅಶೋಕ್ ಅವರ ಕಾಯಕವೇ ಸಾಕ್ಷಿ.
ಮೊರಬ, ಬಂಕಿಕೀಡ್ಲ, ಹಿರೇಗುತ್ತಿ, ಗಂಗಾವಳಿ ಹಾಗೂ ಶಿರೂರು ಗ್ರಾಮದಲ್ಲಿ ಬಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ತನ್ಮೂಲಕ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ವಾಸದ ಮನೆಯಲ್ಲಿ ಅಡಗಿಕೊಂಡು ಭೀತಿ ಮೂಡಿಸಿದ ಈ ಹಾವಿನಿಂದ ಕೇವಲ ಆ ಕುಟುಂಬದವರು ಮಾತ್ರವಲ್ಲದೇ ಸುತ್ತಮುತ್ತಲಿನ ಜನರೂ ಬಹಳ ಆತಂಕಕ್ಕೆ ಒಳಗಾಗಿದ್ದರು.
ವಿಷಯ ತಿಳಿದ 'ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ'ದ ಸದಸ್ಯರಾದ ಶ್ರೀ ಅಶೋಕ್ ನಾಯ್ಕ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಹಾವಿನ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ದಿನವಿಡೀ ಹಾವು ತೆರವುಗೊಳಿಸುವ ಕೆಲಸವನ್ನಷ್ಟೇ ಮಾಡಿ ದಿನ ಮುಗಿಸಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಆತಂಕದಿಂದ ಇದ್ದ ಜನರಿಗಾಗಿ ವಿನಿಯೋಗಿಸಿದ್ದಾರೆ.
ಹಾವು ಹಿಡಿಯುವ ಅಶೋಕ್ ಅವರ ನಿಪುಣತೆಯ ಮುಂದೆ ಮನೆಯೊಳಗೆ ಸೇರಿದ್ದ ಹಾವುಗಳು ಹೆಚ್ಚು ಹೊತ್ತು ಅಡಗಿ ಕೊಳ್ಳಲಾಗಲಿಲ್ಲ. ಮನೆಯೊಳಗೆ ಕತ್ತಲೆಯ ಮೂಲೆಯಲ್ಲಿ ಸರಿದಾಡಲು ಯತ್ನಿಸಿದ ಹಾವು ಕೈ ಕ್ಷಣಮಾತ್ರದಲ್ಲಿ ಅಶೋಕ್ ಅವರ ವಶವಾಗಿದೆ. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಅಶೋಕ್ ಅವರ ಸೇವಾಕಾರ್ಯ ಸುತ್ತಮುತ್ತಲಿನವರ ಮೆಚ್ಚುಗೆಗೆ ಕಾರಣವಾಗಿದೆ. ಅರಣ್ಯ ಇಲಾಖೆ ಹಾವನ್ನು ಅರಣ್ಯಕ್ಕೆ ಬಿಡಲು ನೆರವಾಗಿದೆ.
Comments
Post a Comment