ಬೆಳ್ತಂಗಡಿ: ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕ ಉರಗ ಕಾರ್ಯಾಚರಣೆ..

ಬೆಳ್ತಂಗಡಿ, ಸಪ್ಟೆಂಬರ್ 16: ಗೇರುಕಟ್ಟೆಯ ಕಳಿಯ ಗ್ರಾಮದ ಬರಾಯ ಮನೆ ಕುಸುಮ ಬಂಗೇರ ಇವರ ಮನೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಸುತ್ತಮುತ್ತಲಿನವರಲ್ಲಿ ಭೀತಿ ಮೂಡಿಸಿತ್ತು. ಅಲ್ಲದೇ ಮನೆಯೊಂದರಲ್ಲಿ ಸುಮಾರು ಮೂರರಿಂದ ನಾಲ್ಕು ಕೋಳಿಗಳನ್ನು ತಿಂದಿತ್ತು. 
ವಿಷಯ ತಿಳಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಸಚಿನ್ ಅವರು ಸ್ಥಳಕ್ಕೆ ಧಾವಿಸಿ ರಾತ್ರಿ 11:00 ಗಂಟೆಗೆ ಸ್ಥಳೀಯರ ಸಹಕಾರದೊಂದಿಗೆ ಹೆಬ್ಬಾವನ್ನು ಹಿಡಿದಿರುತ್ತಾರೆ.

ಸ್ಥಳೀಯರಾದ ಅಶ್ವಥ್ ಪೂಜಾರಿ, ವಿನಯ್, ಸುಂದರ ಬರಾಯ, ಪ್ರಕಾಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments