ಕುಮಟಾ: ಹಾವಿನ ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಅಶೋಕ ನಾಯ್ಕ್..

ಕುಮಟಾ, ಸಪ್ಟೆಂಬರ್  30: ಉರಗ ತಜ್ಞ ಅಶೋಕ್ ನಾಯ್ಕ ಅವರು ಇಂದು ನಾಗರ ಹಾವೊಂದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ತಾಲ್ಲೂಕಿನ ಶಿರೂರು ಗ್ರಾಮದ ಅರುಣ್ ನಾಯ್ಕ್ ಅವರ ಮನೆಯಲ್ಲಿ ನಾಗರ ಹಾವೊಂದು ಮನೆಯ ಮಾಳಿಗೆಯಲ್ಲಿ ಅಡಗಿಕೊಂಡು ಭೀತಿ ಮೂಡಿಸಿತ್ತು. ಮನೆಯವರು ಮಾತ್ರವಲ್ಲದೇ ಸುತ್ತಮುತ್ತಲಿನ ಜನರು ಸಹ ಬಹಳ ಆತಂಕಗೊಂಡಿದ್ದರು.

ವಿಷಯ ತಿಳಿದ 'ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ'ದ ಸದಸ್ಯರಾದ ಶ್ರೀ ಅಶೋಕ್ ನಾಯ್ಕ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಹಾವಿನ ಕಾರ್ಯಾಚರಣೆ ನಡೆಸಿದ್ದಾರೆ.

ಹಿಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಅಶೋಕ್ ಅವರ ಸೇವಾಕಾರ್ಯ ಸುತ್ತಮುತ್ತಲಿನವರ ಮೆಚ್ಚುಗೆಗೆ ಕಾರಣವಾಗಿದೆ.

Comments