ಗೋಕಾಕ್: ವಿಪರೀತ ಮಳೆಯಿಂದ ಕುಸಿದ ಮನೆ, ನೆರವಿಗೆ ಧಾವಿಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಗೋಕಾಕ್, ಸಪ್ಟೆಂಬರ್ 19: ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಇಂದು ಭಾರಿ ಮಳೆಯಿಂದ ಮನೆಯೊಂದು ಕುಸಿದು ಬಿದ್ದಿದೆ.
ವಿಷಯ ತಿಳಿದ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕ ರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಸ್ವಯಂಸೇವಕ ಶಾನೂರು ಅವರ ನೇತ್ರತ್ವದಲ್ಲಿ ಮನೆಯ ಸ್ವಚ್ಛತೆ ಕೆಲಸ ಮತ್ತು ಆ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸುವ ಕೆಲಸ ಮಾಡಿರುತ್ತಾರೆ. ಸ್ವಯಂಸೇವಕರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. 

Comments