ಗುರುವಾಯನಕೆರೆ: ಮೃತ ದೇಹ ಬಾವಿಯಿಂದ ಮೇಲಕ್ಕೆತ್ತಲು ಸಹಾಯ ಮಾಡಿದ ವಿಪತ್ತು ನಿರ್ವಹಣಾ ಸ್ವಯಂಸೇವಕ.

ಗುರುವಾಯನಕೆರೆ, ಸಪ್ಟೆಂಬರ್ 27: ಕರಿಮಣೆಳು ಗ್ರಾಮದ ನೂಯಿದಾಗೊಳಿ ಪರಿಸರದ ಸಂತೋಷ್ ನಾಯ್ಕ 32 ವರ್ಷದ  ಯುವಕ ನಿನ್ನೆ ಸಂಜೆ ಬಾವಿಗೆ ಬಿದ್ದು ಮರಣಹೊಂದಿದ್ದು ದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ವರೊಂದಿಗೆ ಹೊಸಂಗಡಿ ವಲಯದ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರಾದ ಅರುಣ್ ಹೆಗ್ಡೆ ಅವರು ಸಹಕರಿಸಿದರು.

ಹೊಸಂಗಡಿ ವಲಯದ ಮೇಲ್ವಿಚಾರಕರಾದ ಅಚ್ಚುತಗೌಡ, ವಿಪತ್ತು ನಿರ್ವಹಣಾ ಸಂಯೋಜಕಿ ಶ್ರೀಮತಿ ಜಯ ಶೀಲಾ ಸೇವಾ ಪ್ರತಿನಿಧಿ ಕೃಷ್ಟ್ನ ಪ್ಪ ಪೂಜಾರಿ ಮೃತರ ಮನೆಗೆ ಭೇಟಿ ನೀಡಿದರು.

Comments