ಸುಳ್ಯ: ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ಸುಳ್ಯ, ಸಪ್ಟೆಂಬರ್ 27: ಸುಳ್ಯ  ತಾಲ್ಲೂಕಿನ ನಾಲ್ಕೂರು ಗ್ರಾಮದ ಹಾಲೆಮಜಲು ಶಾಲಾ ಆವರಣದ ಸ್ವಚ್ಛತೆ ಕಾರ್ಯವನ್ನು ಇಂದು ನಡೆಸಲಾಯಿತು.
ವಿಪತ್ತು ನಿರ್ವಹಣಾ ತಂಡದ ತಾಲ್ಲೂಕು ಸಂಯೋಜಕರಾದ ಶ್ರೀ ಸತೀಶ್ ಇವರ ಮುಂದಾಳತ್ವದಲ್ಲಿ ಒಕ್ಕೂಟದ ಸದಸ್ಯರ ಸಹಭಾಗಿತ್ವದಲ್ಲಿ ನಡೆಸಲಾಯಿತು. ಗ್ರಾಮದ ಸೇವಾಪ್ರತಿನಿಧಿಯವರು ಲಘು ಉಪಹಾರ ನೀಡುವ ಮೂಲಕ ಸಹಕರಿಸಿದರು.

Comments