ಹೊನ್ನಾವರ ವಿಪತ್ತು ನಿರ್ವಹಣಾ ಘಟಕ ಉದ್ಘಾಟನೆ
ಹೊನ್ನಾವರ, ಸಪ್ಟೆಂಬರ್ 26: ಶ್ರೀ ಧರ್ಮಸ್ಥಳ ಸೇವಾ ಹೊನ್ನಾವರ ಘಟಕದ ಉದ್ಘಾಟನೆ ಕಾರ್ಯಕ್ರಮ ಇಂದು ನೆರವೇರಿತು.
ನೂರು ಹದಿನೇಳು ಜನರುಳ್ಳ ವಿಪತ್ತು ನಿರ್ವಹಣಾ ಸ್ವಯಂಸೇವಕರ ತರಬೇತಿಯು ಎನ್.ಡಿ.ಆರ್.ಎಫ್ ಪಡೆಯ ಮೂಲಕ ಸಾಂಗವಾಗಿ ನಡೆದಿದೆ.
ಹೊನ್ನಾವರ ತಹಸೀಲ್ದಾರ್ ವಿವೇಕ ಶೇಣ್ವಿ .ಸರ್ಕಲ್ ಇನ್ಸ್ಪೆಕ್ಟರ್ ವಸಂತ ಆಚಾರ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಶ್ರೀ ಜ್ಞಾನೇಶ್ವರಿ ಪೀಠ ಕರ್ಕಿ ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶರಾವತಿ ನದಿಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಸಂತ ಸಾಲ್ಯಾನ್, ನಿರ್ದೇಶಕರಾದ ಶಂಕರ್ ಶೆಟ್ಟಿ, ಯೋಜನಾಧಿಕಾರಿ ಈಶ್ವರ್, ಜೈವಂತ ಪಟಗಾರ, ನಾಗೇಶ್ ಎನ್ ಪಿ ಉಪಸ್ಥಿತರಿದ್ದರು.
ಕಾರ್ಯಕರ್ತರು ಮತ್ತು ಸ್ವಯಂಸೇವಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲು ಪಡೆದರು. ಸಮಾರೋಪ ಸಮಾರಂಭದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ವರ್ಚುವಲ್ ಕಾನ್ಫರೆನ್ಸ್ ಮೂಲಕ ವಿಶಿಷ್ಟ ಸಂದೇಶ ನೀಡಿದರು. ವಿಪತ್ತಿನ ಸೇವೆ, ವೈಯಕ್ತಿಕ ಸೇವೆ, ಸಾರ್ವಜನಿಕ ಸೇವೆ, ವ್ಯಕ್ತಿತ್ವ ವಿಕಸನ, ಗುರುತಿಸುವಿಕೆ ಮತ್ತು ಪೂಜ್ಯ ಖಾವಂದರ ಈ ಕಾರ್ಯಕ್ರಮದ ಆಶಯಗಳನ್ನು ಸವಿವರವಾಗಿ ಸ್ವಯಂಸೇವಕರಿಗೆ ತಿಳಿಸಿ ಪ್ರೇರಣೆ ನೀಡಿದರು.
ವರದಿ ವರ್ಷದಲ್ಲಿ ಹದಿಮೂರು ತಾಲ್ಲೂಕುಗಳಲ್ಲಿ ವಿಪತ್ತು ನಿರ್ವಹಣಾ ಘಟಕ ಆರಂಭಿಸಬೇಕಿತ್ತು. ಕೇವಲ ಮೂರು ತಿಂಗಳಲ್ಲಿ 11 ಘಟಕಗಳ ಮೂಲಕ ಎಂಟು ನೂರ ಐದು ಮಂದಿಗೆ ಇದುವರೆಗೆ ತರಬೇತಿ ನೀಡಿದಂತಾಗಿದೆ.
Comments
Post a Comment