ಸುಳ್ಯ: ರಸ್ತೆಯಲ್ಲಿ ಬಿದ್ದ ಮರ ತೆರವು ಕಾರ್ಯಾಚರಣೆ ನಡೆಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕ ವೆಂಕಟೇಶ್..
ಸುಳ್ಯ, ಸಪ್ಟೆಂಬರ್ 24: ಇಂದು ಬೆಳಗ್ಗೆ ಸುಮಾರು ಐದು ಗಂಟೆಗೆ ದೊಡ್ಡ ತೋಟ ಹತ್ತಿರದ ಚೆನ್ನಡ್ಕ ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಮರ ರಸ್ತೆಯಲ್ಲಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ವಿಷಯ ತಿಳಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ರಾದ ಶ್ರೀ ವೆಂಕಟೇಶ್ ತಕ್ಷಣ ಸ್ಥಳ ಕ್ಕೆ ಧಾವಿಸಿ ಮರ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ತೆರವುಗೊಳಿಸಿ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಮರ ತೆರವುಗೊಳಿಸಲು ಅಗತ್ಯ ಇರುವ ಚೈನ್ ಸಾ ವನ್ನು ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಿ ಕಾರ್ಯಾಚರಣೆ ನಡೆಸಿರುತ್ತಾರೆ.
Comments
Post a Comment