ಕುಮಟಾ: ವಿಪತ್ತು ನಿರ್ವಹಣಾ ಘಟಕದ ಉದ್ಘಾಟನೆ
ಕುಮಟಾ, ಸಪ್ಟೆಂಬರ್ 25: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಕುಮಟಾ ಘಟಕದ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು.
ಧಾರೇಶ್ವರದಲ್ಲಿ ನಡೆದ ವಿಪತ್ತು ನಿರ್ವಹಣಾ ಘಟಕದ ತರಬೇತಿ ಕಾರ್ಯಕ್ರಮವನ್ನು ಕುಮಟಾ ಸಹಾಯಕ ಕಮಿಷನರ್ ಶ್ರೀ ಎಂ ಅಜಿತ್ ಕೆ.ಎ.ಎಸ್ ಅವರು ಉದ್ಘಾಟನೆ ಮಾಡಿದರು. ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯತ್ ಕುಮಟಾ, ಶ್ರೀ ಸಿಟಿ ನಾಯ್ಕ್ ವೃತ್ತ ನಿರೀಕ್ಷಕರು ಕುಮಟಾ, ಶ್ರೀ ರವಿ, ಕಮಾಂಡರ್ ಶಾಂತಿಲಾಲ್ ಜಡ್ಡಿಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀ ದಯಾನಂದ ದೇಶಭಂಡಾರಿ ಉಪಸ್ಥಿತರಿದ್ದರು.
ಶ್ರೀ ಧಾರೇಶ್ವರ ದೇವಸ್ಥಾನದಲ್ಲಿ ತರಗತಿಗಳು ನಡೆದವು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್ ಮಂಜುನಾಥ್ ಅವರು ವರ್ಚುವಲ್ ಕಾನ್ಫರೆನ್ಸ್ ಮೂಲಕ ಸ್ವಯಂಸೇವಕರನ್ನು ಉದ್ದೇಶಿಸಿ ಪ್ರೇರಣೆಯ ಮಾತುಗಳನ್ನು ನುಡಿದರು.
ಜಿಲ್ಲಾ ನಿರ್ದೇಶಕರಾದ ಶ್ರೀ ಶಂಕರ್ ಶೆಟ್ಟಿ, ಯೋಜನಾಧಿಕಾರಿ ಶ್ರೀ ನಾಗರಾಜ್ ನಾಯ್ಕ್, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ, ಉಡುಪಿ ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗೇಶ್ ಉಪಸ್ಥಿತರಿದ್ದರು.
Comments
Post a Comment