ಸುಳ್ಯ: ವಿಪತ್ತು ನಿರ್ವಹಣೆ ಸಂಯೋಜಕ ಸತೀಶ್ ಅವರಿಂದ ರಕ್ತದಾನ

ಸುಳ್ಯ, ಸಪ್ಟೆಂಬರ್ 27: ವಿಪತ್ತು ನಿರ್ವಹಣಾ ಸಂಯೊಜಕರಾದ ಶ್ರೀ ಸತೀಶ್ ಅವರು ಇಂದು ರಕ್ತದಾನ ಮಾಡಿದರು. ಇದು ಇವರು ಮಾಡುತ್ತಿರುವ ಹದಿನಾರನೆಯ ರಕ್ತದಾನ.

ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನೂರಿನ ವ್ಯಕ್ತಿಗೆ  ತುರ್ತು ರಕ್ತದ ಅವಶ್ಯಕತೆ ಇದ್ದುದನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿದುಕೊಂಡು ತಕ್ಷಣ ತನ್ನ ಸಹಪಾಠಿಗಳನ್ನು ಸೇರಿಸಿಕೊಂಡು 3ಯೂನಿಟ್ ರಕ್ತವನ್ನು ಪೂರೈಕೆ ಮಾಡಿದರು. 

ಇವರ ಜೊತೆಗೆ ಗೆಳೆಯರಾದ ರಾಕೇಶ್ ಮೆಟ್ಟಿನಡ್ಕ. ಪ್ರಕಾಶ್ ಬಾಳುಗೋಡು ಹರ್ಶಿತ್ ಕಲ್ಲಾಜೆ    ಜೊತೆಯಾಗಿ ರಕ್ತದಾನ ಮಾಡಿದರು.

Comments