ಕುಮಟಾ: ಮನೆಯೊಳಗೆ ಅಡಗಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಅಶೋಕ್ ನಾಯ್ಕ್
ಕುಮಟಾ, ಸಪ್ಟೆಂಬರ್ 28: ಐದು ಸಾವಿರಕ್ಕೂ ಅಧಿಕ ಹಾವು ಹಿಡಿದ ಖ್ಯಾತಿ ಹೊಂದಿರುವ ಉರಗ ತಜ್ಞ ಅಶೋಕ್ ನಾಯ್ಕ ನಿನ್ನೆ ಕಾಳಿಂಗ ಸರ್ಪ ವೊಂದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ತಾಲ್ಲೂಕಿನ ಕೋಡ್ಸಣಿ ಗ್ರಾಮದ ಬೀರಾ ಗೌಡ ಅವರ ಮನೆಯಲ್ಲಿ ಕಾಳಿಂಗ ಸರ್ಪ ವೊಂದು ಅಡಗಿಕೊಂಡು ಭೀತಿ ಮೂಡಿಸಿತ್ತು. ಸುತ್ತಮುತ್ತಲಿನ ಜನ ಬಹಳ ಆತಂಕಗೊಂಡಿದ್ದರು.
ವಿಷಯ ತಿಳಿದ 'ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ'ದ ಸದಸ್ಯರಾದ ಶ್ರೀ ಅಶೋಕ್ ನಾಯ್ಕ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಹಾವಿನ ಕಾರ್ಯಾಚರಣೆ ನಡೆಸಿದ್ದಾರೆ.
ಹಾವು ಹಿಡಿಯುವ ಅಶೋಕ್ ಅವರ ನಿಪುಣತೆಯ ಮುಂದೆ ಕಾಳಿಂಗ ಹೆಚ್ಚು ಹೊತ್ತು ಅಡಗಿ ಕೊಳ್ಳಲಾಗಲಿಲ್ಲ. ಮನೆಯೊಳಗೆ ಕತ್ತಲೆಯ ಮೂಲೆಯಲ್ಲಿ ಸರಿದಾಡಲು ಯತ್ನಿಸಿದ ಹಾವು ಕೈ ವಶವಾಗಿದೆ. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಅಶೋಕ್ ಅವರ ಸೇವಾಕಾರ್ಯ ಸುತ್ತಮುತ್ತಲಿನವರ ಮೆಚ್ಚುಗೆಗೆ ಕಾರಣವಾಗಿದೆ.
Comments
Post a Comment