ಧಾರವಾಡ: ವಿಪತ್ತು ನಿರ್ವಹಣಾ ಘಟಕ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ರಕ್ತದಾನ ಕಾರ್ಯಕ್ರಮ. 20 ಸ್ವಯಂಸೇವಕರಿಂದ ರಕ್ತದಾನ.
ಧಾರವಾಡ, ಅಕ್ಟೋಬರ್ 24: ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ, ದಸರಾ ಉತ್ಸವ ಸಮಿತಿ ಹಾಗೂ ಡೋರ್ ಸಮಾಜದ ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಲಿಡ್ಕರ್ ಕಾಲೋನಿ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧಾರವಾಡ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡು ರಕ್ತದಾನ ಮಾಡಿದರು.
ರಕ್ತದಾನ ಶಿಬಿರದಲ್ಲಿ ರಕ್ತದ ಮಾದರಿ ತಪಾಸಣೆ ಹಾಗೂ ರಕ್ತದಾನ ಏರ್ಪಡಿಸಲಾಗಿತ್ತು.
ಡಾ. ಶ್ರೀಕಂಠ ರಾಮನಗೌಡ ಅವರು ರಕ್ತ ಪರೀಕ್ಷೆ ನಡೆಸಿದರು. ಒಟ್ಟು ಇಪ್ಪತ್ತು ಸ್ವಯಂಸೇವಕರು ರಕ್ತದಾನ ಮಾಡಿರುತ್ತಾರೆ.
ವಿಪತ್ತು ನಿರ್ವಹಣೆ ಸಂಯೋಜಕಿ ವೇದ ಬಿಜಾಪುರ್, ಸ್ವಯಂಸೇವಕರಾದ ಗೌಡಪ್ಪ ಎಲ್ಲಪ್ಪ ಹನುಮಂತ, ಶ್ರೀಕಾಂತ್, ಮಂಜುನಾಥ್, ವಿನಾಯಕ, ರಾಜು ಭಾಗವಹಿಸಿ ರಕ್ತದಾನ ಮಾಡಿದರು.
ರಕ್ತದಾನ ಮಾಡುವುದರಿಂದ ಬಡವರಿಗೆ ಸಹಾಯವಾಗುತ್ತದೆ. ನವ ಯುವಕರಲ್ಲಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕೆಂದು ಮನವರಿಕೆ ಆಗಿರುವುದು ಸಂತೋಷ ದಾಯಕವಾಗಿದೆ ಎಂದು ದಸರಾ ಉತ್ಸವ ಸಮಿತಿಯ ಸದಸ್ಯ ರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ:
ವೇದ ವಿಜಾಪುರ
ಸಂಯೋಜಕಿ
ವಿಪತ್ತು ನಿರ್ವಹಣೆ ಘಟಕ, ಧಾರವಾಡ
Comments
Post a Comment