ಕಾರವಾರ: ವಿಪತ್ತು ನಿರ್ವಹಣೆ ಸಂಯೋಜಕರ ಸಭೆ.
ಕಾರವಾರ, ಅಕ್ಟೋಬರ್ 23: ತಾಲೂಕಿನ ವಿಪತ್ತು ನಿರ್ವಹಣಾ ಸಂಯೋಜಕರ ಸಭೆಯನ್ನು ಇಂದು ನಡೆಯಿತು.
ಆರಂಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಚಟುವಟಿಕೆಗಳು ಮತ್ತು ಸಂಯೋಜಕರ ಅನುಭವ ಕುರಿತು ವಿಶ್ಲೇಷಣೆ ನಡೆಸಲಾಯಿತು.
ವಿಪತ್ತು ನಿರ್ವಹಣಾ ಕಾರ್ಯಕ್ರಮ ನಿರಂತರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಲಹೆ, ಪ್ರೇರಣೆ ನೀಡಲಾಯಿತು.
ಸಭೆಯಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ ಮಾಹಿತಿ ನೀಡಿದರು. ಉಡುಪಿ ಪ್ರಾದೇಶಿಕ ಕಚೇರಿಯ ಜನಜಾಗೃತಿ ಕಾರ್ಯಕ್ರಮ ಯೋಜನಾಧಿಕಾರಿ ಶ್ರೀ ನಾಗೇಶ್ ಹಾಗೂ ತಾಲೂಕಿನ ಯೋಜನಾಧಿಕಾರಿ ಶ್ರೀ ಶೇಖರ್ ನಾಯ್ಕ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಒಟ್ಟು ಹದಿನೆಂಟು ಸಂಯೋಜಕರು ಉಪಸ್ಥಿತರಿದ್ದರು.
Comments
Post a Comment