ಗುರುವಾಯನಕೆರೆ: ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸಂಭವನೀಯ ಅಪಾಯ ತಪ್ಪಿಸಿದ ಅಳದಂಗಡಿ ಘಟಕದ ಸ್ವಯಂಸೇವಕರು.

ಗುರುವಾಯನಕೆರೆ, ಅಕ್ಟೋಬರ್ 26: ಕಾರ್ಕಳ ರಸ್ತೆಯಲ್ಲಿ ಆಂಧ್ರ ಮೂಲದ ಲಾರಿಯೊಂದು ಕೆಲವು ದಿನಗಳ ಹಿಂದೆ ಕೆಟ್ಟು ನಿಂತಿದ್ದು ನಾಲ್ಕೈದು ದಿನ ಕಳೆದರೂ ಸಂಬಂಧಪಟ್ಟವರು ಗಮನ ಹರಿಸದೇ ಇದ್ದುದರಿಂದ ರಾತ್ರಿ ಹೊತ್ತಿನಲ್ಲಿ ಸಿಗ್ನಲ್      ಇಲ್ಲದ ಕಾರಣ ವಾಹನಗಳ ಅಪಘಾತಕ್ಕೆ ಕಾರಣವಾಗಿತ್ತು.

ಇದನ್ನು ಗಮನಿಸಿದ ವಿಪತ್ತು ನಿರ್ವಹಣೆ ಘಟಕ ಅಳದಂಗಡಿಯ ಸ್ವಯಂಸೇವಕರು      ಅಳದಂಗಡಿಯ ಸತ್ಯದೇವತಾ ದೈವಸ್ಥಾನದ ಆಡಳಿತದಾರರಾದ ಶ್ರೀ ಶಿವಪ್ರಸಾದ ಅಜಿಲ ಅವರನ್ನು  ಸಂಪರ್ಕಿಸಿ ವಿಷಯವನ್ನು ತಿಳಿಸಿದ್ದಾರೆ.

ಸ್ವಯಂಸೇವಕರು ನೀಡಿದ ಮಾಹಿತಿಯನ್ನು ಅರಿತು ಕೂಡಲೇ ಸ್ಪಂದಿಸಿದ ಅವರು ವಾಹನಗಳಿಗೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಬ್ಯಾರಿಕೇಡನ್ನು ಒದಗಿಸಿದರು.

ತನ್ಮೂಲಕ ಲಾರಿ ಕೆಟ್ಟು ನಿಂತ ಸ್ಥಳದಲ್ಲಿ ಅಪಘಾತಗಳನ್ನು ತಡೆಯುವಲ್ಲಿ  ಸಹಕರಿಸಿದರು. 

ಸಮಸ್ಯೆಯನ್ನು ಗುರುತಿಸಿ ಸಕಾಲದಲ್ಲಿ ಸ್ಪಂದಿಸಿದ ವಿಪತ್ತು ನಿರ್ವಹಣೆ ಅಳದಂಗಡಿ ಘಟಕದ ಸೇವಾಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

ವರದಿ:
ಶ್ರೀಕಾಂತ್ ಪಟವರ್ಧನ್
ಸಂಯೋಜಕ
ವಿಪತ್ತು ನಿರ್ವಹಣೆ ಘಟಕ
ಅಳದಂಗಡಿ

Comments