ಗುರುವಾಯನಕೆರೆ: ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ: ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು.

ಗುರುವಾಯನಕೆರೆ, ಅಕ್ಟೋಬರ್ 25: ತಾಲ್ಲೂಕಿನ ಕಲ್ಲೇರಿಯಲ್ಲಿ ಇಂದು ಬೈಕ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. 

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನೇರಲ್ಪಲ್ಕೆ ಗ್ರಾಮದವರಾಗಿದ್ದು  ಲಾರಿ ಬೆಳ್ತಂಗಡಿ  ಕಡೆಗೆ  ಹೋಗುತ್ತಿತ್ತು.

ಬೈಕ್ ಸವಾರ  ಗಂಭೀರವಾಗಿ  ಗಾಯಗೊಡಿದ್ದು ಆತನನ್ನು ತುರ್ತು  ಚಿಕಿತ್ಸೆಗಾಗಿ  ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 

ಅಪಘಾತ ಸ್ಥಳದಲ್ಲಿಯೇ ಇದ್ದ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ತಣ್ಣೀರುಪಂಥ ಘಟಕದ ಸಂಯೋಜಕರಾದ ಸುರೇಶ್ ಅವರು ಆಸ್ಪತ್ರೆಗೆ ಕೊಂಡೊಯ್ಯಲು ಸಹಕಾರ ನೀಡಿದ್ದಾರೆ.

ಸ್ಥಳೀಯ ರೀಕ್ಷಾ ಚಾಲಕರು ಮತ್ತು ಅಂಗಡಿ ಮಾಲಕರು  ಅಪಘಾತ ಸ್ಥಳಕ್ಕೆ ಧಾವಿಸಿ ಅಪಘಾತದಲ್ಲಿ ತೊಂದರೆಗೆ ಒಳಗಾದ ವ್ಯಕ್ತಿಯ ಚಿಕಿತ್ಸಾ ವೆಚ್ಚ ಸಂಗ್ರಹದ ಕುರಿತು ಸಹಕಾರ ನೀಡಿರುತ್ತಾರೆ.

ವರದಿ:

ಸುರೇಶ್
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ, ತಣ್ಣೀರುಪಂಥ
 

Comments