ಹೊನ್ನಾವರ: ಇಡಗುಂಜಿ ಘಟಕದಿಂದ ರಸ್ತೆ ರಿಪೇರಿ ಸೇವಾಕಾರ್ಯ
'ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು' ಎಷ್ಟು ಸತ್ಯವಾದ ಮಾತು. ಹಾಗೆ ಸ್ವಾರ್ಥ ದೂರವಾಗಿ ನಾವು' ನಮ್ಮದು ಎನ್ನುವ ಅರಿವಿನ ಜ್ಯೋತಿ ಬೆಳಗಿದರೆ? ಅಬ್ಬಾ ! ಎಷ್ಟು ಸುಂದರ ಆಗಬಹುದು ಒಂದು ಊರು, ಕೇರಿ ಎನ್ನುವುದನ್ನು ಕಲ್ಪನೆ ಮಾಡಿ ಕೊಂಡರೂ ಸಂತೃಪ್ತಿಯ ಭಾವ ಅನಂತವಾಗಿ ಚಿಮ್ಮುತ್ತದೆ.
ಅರಿವು ಮೂಡಿದರೆ ಮನುಷ್ಯ ಮಾನವ ಆಗಬಲ್ಲ. ಇತಿಹಾಸ ಬರೆಯ ಬಲ್ಲ. ಅದಕ್ಕೇ ಬುದ್ಧ ಹೇಳಿದ್ದು " ಅರಿವೇ ಗುರು " ಅಂತ.
ಊರು ನಮಗೇನು ಕೊಟ್ಟಿತು ಅನ್ನುವುದಕ್ಕಿಂತ ನಾವು ಊರಿಗೇನು ಕೊಟ್ಟೆವು ಎಂಬ ಅರಿವು ಎಲ್ಲರಿಗೂ ಬಂದರೆ ಊರು ಬದಲಾಗುವುದರ ಜೊತೆಗೆ ಉದ್ದಾರವು ಆಗುತ್ತದೆ.
ಇದು ನಮ್ಮೂರ ಮುಗಳಿಯ ಹೊಸ ಹಂಬಲದ ಒಂದು ಪ್ರಯತ್ನ. ಕೇರಿಯ ಮದ್ಯೆ ಹಾದು ಹೋದ ರಸ್ತೆಯು ಹೌದು, ಮಳೆಗಾಲದಲ್ಲಿ ಗುಡ್ಡದಿಂದ ಬರುವ ನೀರು ಹರಿದು ಹೋಗುವ ದೋಮಗಿಯು ಹೌದು.ಇಲ್ಲಿಯ ಸಮಾನ ಮನಸ್ಕರ ವಯಸ್ಸಿನ ಭೇದ ಮರೆತ ಈ ತಂಡ ಸುಮಾರು 200 ಮೀಟರ್ ಗಿಂತ ಉದ್ದವಿರುವ ಇಡೀ ರಸ್ತೆಯನ್ನು ಎಲ್ಲರೂ ಸೇರಿ ಸ್ವಚ್ಛಗೊಳಿಸಿದರು.
ಮಳೆಗಾಲದ ಕಲ್ಲು ಮಣ್ಣು, ಕಸ, ಕಡ್ಡಿಗಳಿಂದ ತುಂಬಿ ಹೋದ ರಸ್ತೆ ಈಗ ಲಕ ಲಕ ಹೊಳೆಯುವಂತೆ ಆಗಿದೆ.
ಇದು ಉಳಿದವರಿಗೂ ಮಾದರಿಯಾಗಬಲ್ಲ ಕಾರ್ಯ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿಯಾದರೂ ಆಯಾ ಕೇರಿಯ ಜನರೂ ತಮ್ಮ ತಮ್ಮ ಭಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಾರ್ಯ ಮಾಡಿದರೆ ಇತಿಹಾಸ ತಾನಾಗಿಯೇ ಬರೆಯಲ್ಪಡುತ್ತದೆ. ಆಗ ನಾವು ಇತಿಹಾಸ ಬರೆಯಬಹುದು. ಇಲ್ಲಾ ಇತಿಹಾಸದಲ್ಲಿ ಉಳಿಯಬಹುದು.
ಊರಿಗಾಗಿ ಊರೇ ಮನಸು ಮಾಡಿದರೆ ಸ್ವಚ್ಛವಾಗಿ ಇಟ್ಟುಕೊಳ್ಳುವ ಕಾರ್ಯ ಕಷ್ಟದಾಯಕ ಅಲ್ಲವೇ ಅಲ್ಲಾ. ಇಲ್ಲಿ ಯಾವುದೇ ಖರ್ಚು ಇಲ್ಲಾ. ಮನಸು ಒಂದಿದ್ದರೆ ಮಾರ್ಗ ಇದೆ ಅನ್ನೋದಂತೂ ಪಕ್ಕಾ. ಪ್ರತಿ ರವಿವಾರ ಒಂದಿಷ್ಟು ಜನ ಸೇರಿ ಊರಿನ ಅಂಕು ಡೊಂಕು ದಿದ್ದುವ ಕಾರ್ಯ ಮಾಡಿದರೆ ಊರನ್ನು ಸದಾ ನೆಟ್ಟಗೆ ಇಟ್ಟುಕೊಳ್ಳಲು , ಆ ಮೂಲಕ ಸ್ವಚ್ಛತೆಯ ಕಂಪ ಪಸರಿಸುವುದಕ್ಕೆ ಬೇರೆ ಯಾರೋ ಬರಬೇಕಾದ ಅಗತ್ಯ ಇರಲಾರದು. ಏನಂತೀರಿ? ಖಂಡಿತ ಸಾಧ್ಯ.
ನೀವು ಇತಿಹಾಸ ಬರೆಯಿರಿ. ಧರ್ಮಸ್ಥಳ ಸಂಘದ ವಿಪತ್ತು ನಿರ್ವಹಣಾ ಸಂಯೋಜಕಿ ಭಾಗ್ಯಶ್ರೀ ಭಟ್ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯ ಮಾದರಿಗೊಂದು ಉದಾಹರಣೆಯೇ ಸರಿ......
ಹಳ್ಳಿ ನ್ಯೂಸ್
Comments
Post a Comment