ಗೋಕಾಕ್: ವಿಪತ್ತು ನಿರ್ವಹಣೆ ಸಂಯೋಜಕರ ಸಭೆ.
ಗೋಕಾಕ್, ಅಕ್ಟೋಬರ್ 21: ತಾಲೂಕಿನ ವಿಪತ್ತು ನಿರ್ವಹಣಾ ಸಂಯೋಜಕರ ಸಭೆಯನ್ನು ಇಂದು ನಡೆಯಿತು.
ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಕೇಶವ್ ದೇವಾಂಗ ಅವರು ಉಪಸ್ಥಿತರಿದ್ದು ವಿಪತ್ತು ನಿರ್ವಹಣಾ ಕಾರ್ಯ ಚಟುವಟಿಕೆಗಳು ಮತ್ತು ಸಂಯೋಜಕರ ಅನುಭವ ಕುರಿತು ವಿಶ್ಲೇಷಣೆ ನಡೆಸಿದರು. ವಿಪತ್ತು ನಿರ್ವಹಣಾ ಕಾರ್ಯಕ್ರಮ ನಿರಂತರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ ಮಾಹಿತಿ ನೀಡಿದರು. ಪ್ರಾದೇಶಿಕ ಕಚೇರಿಯ ಜನಜಾಗೃತಿ ಕಾರ್ಯಕ್ರಮ ಯೋಜನಾಧಿಕಾರಿ ಶ್ರೀ ನಾಗೇಶ್ ಹಾಗೂ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಮಮತಾ ನಾಯ್ಕ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಒಟ್ಟು ಹದಿನಾರು ಸಂಯೋಜಕರು ಉಪಸ್ಥಿತರಿದ್ದರು.
Comments
Post a Comment