ಗುರುವಾಯನಕೆರೆ: ರಸ್ತೆ ರಿಪೇರಿ ಮಾಡುವ ಮೂಲಕ ಸಂಭವನೀಯ ಅಪಾಯ ತಪ್ಪಿಸಿದ ಅಳದಂಗಡಿ ಘಟಕದ ಸ್ವಯಂಸೇವಕರು.

ಗುರುವಾಯನಕೆರೆ, ಅಕ್ಟೋಬರ್ 25: ಗುಂಡಿ ಬಿದ್ದಿರುವ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಅಳದಂಗಡಿ ಘಟಕದ ಸ್ವಯಂಸೇವಕರು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಕಾರ್ಕಳ ಬೆಳ್ತಂಗಡಿ ಹೆದ್ದಾರಿಯ ಪಿಲ್ಯ ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ದಿನನಿತ್ಯ ಓಡಾಡುವ ವಾಹನಗಳಿಗೆ ಸಂಚರಿಸಲು ತುಂಬಾ ತೊಂದರೆಯಾಗಿತ್ತು.

ಇದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದ ಅಳದಂಗಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ರಸ್ತೆಯನ್ನು ರಿಪೇರಿ ಮಾಡಲು ನಿರ್ಧರಿಸಿ ಸೇವಾಕಾರ್ಯ ನಿರ್ವಹಿಸಿದ್ದಾರೆ.

ಸ್ವಯಂಸೇವಕರಾದ  ಶುಭಕರ ಪೂಜಾರಿ ಮತ್ತು ಶ್ರೀ ವಿಲಾಸ್ ರವರು ಸ್ಥಳೀಯರಾದ   ಶ್ರೀ ಶೇಖರ ಭಂಡಾರಿ ಹಾಗೂ ಫೆ ರಮೇಶ್ ರವರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವರದಿ:

ಶ್ರೀಕಾಂತ್ ಪಟವರ್ಧನ್
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ
ಅಳದಂಗಡಿ

Comments