ರೋಣ: ವಿಪತ್ತು ನಿರ್ವಹಣಾ ಸಂಯೋಜಕರ ತರಬೇತಿ.
ರೋಣ, ನರಗುಂದ, ಅಕ್ಟೋಬರ್ 31: ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲಾ ವ್ಯಾಪ್ತಿಯ ರೋಣ ಮತ್ತು ನರಗುಂದ ತಾಲ್ಲೂಕುಗಳಲ್ಲಿ ವಿಪತ್ತು ನಿರ್ವಹಣಾ ಘಟಕವನ್ನು ಆರಂಭಿಸುವ ಪ್ರಯುಕ್ತ ಸಂಯೋಜಕರ ತರಬೇತಿಯನ್ನು ನಡೆಸಲಾಯಿತು.
ಎರಡೂ ತಾಲ್ಲೂಕುಗಳ ಹದಿನೈದು ಮಂದಿ ಸಂಯೋಜಕರು ಹಾಜರಿದ್ದರು. ಮಳೆಗಾಲದಲ್ಲಿ ವಿಪರೀತ ಮಳೆ ಬಂದ ಸಂದರ್ಭದಲ್ಲಿ ಮಲಪ್ರಭಾ ನದಿಗೆ ಕಟ್ಟಲಾದ ನವಿಲುತೀರ್ಥ ಅಣೆಕಟ್ಟಿನಲ್ಲಿ ನೀರು ಹೆಚ್ಚಾದಾಗ ಹೊರಬಿಟ್ಟ ನೀರಿನ ಕಾರಣಕ್ಕಾಗಿ ಹಾಗೂ ಬೆಣ್ಣೆಹಳ್ಳದ ಕಾರಣಕ್ಕಾಗಿ ಹೊನ್ನೂರು ಹೊಳೆ ಆಲೂರು ಯಾಂಗಲ್ ಅರಷಿಣಗೋಡಿ ನರಗುಂದ ಪ್ರದೇಶಗಳು ಮುಳುಗಡೆಯಾಗುವ ಅಂಥ ಸಂದರ್ಭದಲ್ಲಿ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗುವ ಕಾರಣಕ್ಕಾಗಿ ವಿಪತ್ತು ನಿರ್ವಹಣಾ ಘಟಕವನ್ನು ಆರಂಭಿಸಲಾಗಿದೆ.
ಬಂದಂತಹ ಸಂಯೋಜಕರುಗಳು ಬಹಳ ಉತ್ಸಾಹದಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಗದಗ ಅಧ್ಯಕ್ಷರಾದ ಪ್ರೊಫೆಸರ್ ಅಸೋಟಿ ಹೊಳೆಹೊನ್ನೂರು ಹೊಳೆಆಲೂರ ಎಪಿಎಂಸಿ ಅಧ್ಯಕ್ಷರಾದ ಶ್ರೀ ರಾಜಣ್ಣ ಹೂಲಿ ಗದಗ ನಿರ್ದೇಶಕರಾದ ಶಿವಾನಂದ ಆಚಾರ್ಯ ಯೋಜನಾಧಿಕಾರಿ ವಸಂತಿ ಯೋಜನಾಧಿಕಾರಿ ಜೈವಂತ ಪಟಗಾರ ಯೋಜನಾಧಿಕಾರಿ ಮಾಧವ ನಾಯ್ಕ ಉಪಸ್ಥಿತರಿದ್ದರು.
Comments
Post a Comment