ಹೊನ್ನಾವರ: ಇಡಗುಂಜಿ ಘಟಕದ ಸ್ವಯಂಸೇವಕರಿಂದ ರಸ್ತೆ ರಿಪೇರಿ ಸೇವಾಕಾರ್ಯ.
ಹೊನ್ನಾವರ, ಅಕ್ಟೋಬರ್ 31: ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರಿಂದ ರಸ್ತೆ ರಿಪೇರಿ ಹಾಗೂ ರಸ್ತೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ನಿರಂತರ ವಾಗಿ ಗುಡ್ಡದಿಂದ ನೀರು ಹರಿದು ಬಂದು ರಸ್ತೆಯಲ್ಲಿ ಜಮೆಯಾಗಿರುವ ಮಣ್ಣು ತೆಗೆಯುವುದು, ಮಣ್ಣು ಕೊಚ್ಚಿ ಹೋಗಿ ಗುಂಡಿ ಬಿದ್ದ ಸ್ಥಳದಲ್ಲಿ ಮಣ್ಣು ಮುಚ್ಚಿರುವುದು, ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಸ್ವಚ್ಛತೆ ಕೆಲಸವನ್ನು ನಿರ್ವಹಿಸಿರುತ್ತಾರೆ.
ಇಡಗುಂಜಿಯ ವಿಪತ್ತುನಿರ್ವಹಣಾ ಘಟಕದ ಸಂಯೋಜಕಿ ಭಾಗ್ಯಶ್ರೀ ಭಟ್ಟರವರು ಪ್ರೇರಣೆ ನೀಡಿರುತ್ತಾರೆ. ಗ್ರಾಮದ ಉತ್ಸಾಹಿ ಯುವಕರು, ಹಿರಿಯರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:
ಭಾಗ್ಯಶ್ರೀ ಭಟ್
ವಿಪತ್ತು ನಿರ್ವಹಣಾ ಘಟಕ
ಇಡಗುಂಜಿ, ಹೊನ್ನಾವರ ತಾಲೂಕು
Comments
Post a Comment