ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಮಡಿದ ಶ್ವಾನ: ರಸ್ತೆಯಿಂದ ತೆರವುಗೊಳಿಸಿ ದಫನ ಮಾಡಿದ ಬೆಳಾಲು ಘಟಕದ ಸ್ವಯಂಸೇವಕ ರವೀಂದ್ರ.
ಬೆಳ್ತಂಗಡಿ, ಅಕ್ಟೋಬರ್ 27: ವಿಪತ್ತು ನಿರ್ವಹಣೆ ಘಟಕ ಉಜಿರೆ/ಬೆಳಾಲುವಿನ ಸ್ವಯಂಸೇವಕರಾದ ರವೀಂದ್ರ ಅವರು ಮಾನವೀಯ ಕಾರ್ಯವೊಂದರಲ್ಲಿ ತೊಡಗಿಕೊಂಡು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಉಜಿರೆಯಿಂದ ಸುರ್ಯ ಗ್ರಾಮಕ್ಕೆ ತೆರಳುವ ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನಕ್ಕೆ ನಾಯಿಯೊಂದು ಬಡಿದು ವಾಹನದ ಅಡಿಯಲ್ಲಿ ಬಿದ್ದು ಸತ್ತು ಹೋಗಿತ್ತು.
ಅದೇ ದಾರಿಯಲ್ಲಿ ತೆರಳುತ್ತಿದ್ದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ರವೀಂದ್ರ ಅವರು ನಾಯಿಯ ಕಳೆಬರವನ್ನು ತೆರವುಗೊಳಿಸಲು ನಿರ್ಧರಿಸಿ ರಸ್ತೆಯ ಪಕ್ಕದಲ್ಲೇ ಇರುವ ಮನೆಯೊಂದರ ಸದಸ್ಯರ ಸಹಕಾರ ಕೇಳಿದರು.
ಸತ್ತು ಬಿದ್ದ ಪ್ರಾಣಿಯನ್ನು ನೋಡಿಯೂ ನೋಡದಂತೆ ತೆರಳುವ ಅನೇಕರ ಮಧ್ಯೆ ಇವರು ಒಳ್ಳೆಯ ಕಾರ್ಯವೊಂದಕ್ಕೆ ತಮ್ಮ ಸಹಾಯ ಕೇಳುತ್ತಿದ್ದಾರೆ. ತಾವ್ಯಾಕೆ ಸಹಕಾರ ನೀಡಬಾರದು ಎಂದು ನಿರ್ಧರಿಸಿದ ಪಕ್ಕದ ಮನೆಯವರು ಸಹಾಯ ಮಾಡಿರುತ್ತಾರೆ.
ರಸ್ತೆಯ ಪಕ್ಕದಲ್ಲೇ ಗುಂಡಿಯನ್ನು ತೋಡಿ ನಾಯಿಯನ್ನು ರಸ್ತೆಯಿಂದ ತೆರವುಗೊಳಿಸಿ ದಫನ ಮಾಡಿರುತ್ತಾರೆ.
ರವೀಂದ್ರ ಅವರ ಮಾನವೀಯತೆಯ ಕಾರ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ:
ಆಶಾ
ಸಂಯೋಜಕಿ
ವಿಪತ್ತು ನಿರ್ವಹಣೆ ಘಟಕ
ಬೆಳಾಲು/ಉಜಿರೆ
Comments
Post a Comment