ಗುರುವಾಯನಕೆರೆ: ಅಳದಂಗಡಿ ಘಟಕದ ಸ್ವಯಂಸೇವಕರಿಂದ ಶಾಲೆ ಕಟ್ಟಡ ರಚನೆಗೆ ಅಳಿಲು ಸೇವೆ.

ಗುರುವಾಯನಕೆರೆ, ಅಕ್ಟೋಬರ್ 30: ಸ್ವಯಂಪ್ರೇರಿತ ಶ್ರಮದಾನವನ್ನು ಇಂದು    ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಶ್ರೀರಾಮ ಶಾಲೆ ಸುಲ್ಕೇರಿ ಯಲ್ಲಿ ನಡೆಸಲಾಯಿತು.

ಸುಲ್ಕೇರಿ ಗ್ರಾಮದಲ್ಲಿ ನೂತನವಾಗಿ  ಶಾಲಾ ಕಟ್ಟಡ ನಿರ್ಮಾಣ ಆಗುತ್ತಿದ್ದು  ಊರಿನ ಹಾಗೂ ಪರವೂರಿನ  ವಿದ್ಯಾಭಿಮಾನಿಗಳು      ಶ್ರಮದಾನದ ಮೂಲಕ ಕಟ್ಟಡ ಕಟ್ಟುವಲ್ಲಿ  ಸಹಕರಿಸುತ್ತಿದ್ದಾರೆ.

ಅಳದಂಗಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು  ಸ್ವ ಪ್ರೇರಣೆಯಿಂದ  ಇಂದು ಶಾಲಾ ಆವರಣದಲ್ಲಿ     ಹೊಯಿಗೆಯನ್ನು ಜಾಳಿಸಿ ಕೊಟ್ಟು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರು.

 ಶ್ರಮದಾನದಲ್ಲಿ ಸ್ವಯಂಸೇವಕರಾದ ಶ್ರೀ ಪ್ರಕಾಶ್ ಕೊಲ್ಲಂಗೆ  ಮತ್ತು ಶ್ರೀಕಾಂತರವರು  ಭಾಗಿಯಾದರು.

ಸ್ವಯಂಸೇವಕರ  ಪ್ರೇರಣಾ ಕಾರ್ಯಕ್ಕೆ ಶಾಲಾ ಅಧ್ಯಾಪಕರಾದ ಶ್ರೀ ಪ್ರಮೋದ್ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ:

ಶ್ರೀಕಾಂತ್ ಪಟವರ್ಧನ್ 
ಸಂಯೋಜಕ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಅಳದಂಗಡಿ ಘಟಕ.

Comments