ಬೆಳ್ತಂಗಡಿ: ಮಡಂತ್ಯಾರು ಘಟಕದಿಂದ ಶಾಲಾ ಆವರಣದ ಸ್ವಚ್ಚತಾ ಕಾರ್ಯಕ್ರಮ.
ಗುರುವಾಯನಕೆರೆ, ಅಕ್ಟೊಬರ್ 25: ಸೋಣಂದೂರು ಗ್ರಾಮದ ಸರಕಾರಿ ಉನ್ನತ್ತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಮಡಂತ್ಯಾರು ವಲಯದ ವಿಪತ್ತು ನಿರ್ವಹಣಾ ಘಟಕ ಮತ್ತು ವಿಶ್ವ ಹಿಂದೂ ಪರಿಷತ್ ಇದರ ಸಹಯೋಗದೊಂದಿಗೆ ಇಂದು ಸೋಣಂದೂರು ಶಾಲೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಸ್ವಯಂ ಪ್ರೇರಣೆಯಿಂದ ನಡೆಸಿದ ಸ್ವಯಂಸೇವಕರ ಕಾರ್ಯದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜೆಸಿಂತಾ ರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಂತ್ಯಾರು ವಲಯದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಶ್ರೀ ಸತೀಶ್ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯರು, ವಿಶ್ವ ಹಿಂದೂ ಪರಿಷತ್ ನ ಮನೋಜ್,ಹೀತೇಶ್, ಗಣೇಶ್, ಪ್ರಸಾದ್, ಯೋಗೀಶ್, ಸತೀಶ್, ದೀಕ್ಷಿತ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ವರದಿ:
ಸತೀಶ್ ಆಚಾರ್ಯ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ
ಮಡಂತ್ಯಾರು, ಬೆಳ್ತಂಗಡಿ
Comments
Post a Comment