ಧಾರವಾಡ: ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ: ಅಗ್ನಿಶಾಮಕ ದಳದಿಂದ ಬೆಂಕಿ ನಿರ್ವಹಣೆ ತರಬೇತಿ.
ಧಾರವಾಡ, ಅಕ್ಟೋಬರ್ 30: ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ ಧಾರವಾಡದ ಮಾಸಿಕ ಸಭೆ ಹಾಗೂ ಕಲಘಟಗಿ ಕುಂದಗೋಳ ಹುಬ್ಬಳ್ಳಿಯ ಸಂಯೋಜಕರ ತರಬೇತಿ ಇವತ್ತು ನಡೆಯಿತು.
ಧಾರವಾಡದ ಅಗ್ನಿಶಾಮಕ ವಿಭಾಗದಿಂದ 2 ಅಗ್ನಿಶಾಮಕ ವಾಹನಗಳು ಸಕಲ ಪರಿಕರಗಳನ್ನೊಳಗೊಂಡ ಡಿಎಫ್ ಒ ಶ್ರೀಕಾಂತ್, ಆರ್ ಎಫ್ ಒ ಶ್ರೀ ವಿನಾಯಕ ಇವರುಗಳು ಬಂದು ಬೆಂಕಿ ಅವಘಡಗಳು ಆರಿಸುವ ವಿಧಾನಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದರು.
ಹತ್ತಕ್ಕೂ ಮಿಗಿಲಾದ ಅಗ್ನಿಶಾಮಕ ಠಾಣಾಧಿಕಾರಿಗಳು ಪೊಲೀಸರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತರಬೇತಿಯಲ್ಲಿ ಸ್ವಯಂಸೇವಕರು ಮಾಡಿದ ಕಾರ್ಯಗಳ ಮೌಲ್ಯಮಾಪನ ನಡೆಸಲಾಗಿತ್ತು.
ಸಂಯೋಜಕರಿಗೆ ತರಬೇತಿ ನೀಡಿ ಸ್ವಯಂಸೇವಕರ ತರಬೇತಿ ಗೆ ಪ್ರೇರಣೆ ನೀಡಲಾಯಿತು. ಸ್ವಯಂಸೇವಕರಿಗೆ ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಮಾರ್ಗದರ್ಶನ ಸಲಹೆ ನೀಡಲಾಯಿತು.
ಸೀಗೆ ಹುಣ್ಣಿಮೆ ಈದ್ ಮಿಲಾದ್ ಹಬ್ಬಗಳ ವೈಶಿಷ್ಟ್ಯತೆಗಳನ್ನು ತಿಳಿಸಿ ಸಭೆಯಲ್ಲೇ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ನಿರ್ದೇಶಕರಾದ ಸುರೇಶ್ ಮೈಲಿ, ಯೋಜನಾಧಿಕಾರಿ ಉಲ್ಲಾಸ ಮೇಸ್ತ, ಜೈವಂತ ಪಟಗಾರ, ಮಂಜುನಾಥ, ಮಂಜುನಾಥ, ಕುಸುಮಾಧರ್, ನಾಗೇಶ್ ವೈ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ಥಳೀಯ ದೃಶ್ಯಮಾಧ್ಯಮಗಳು ದಿಗ್ವಿಜಯ ಪಬ್ಲಿಕ್ ಟಿವಿಯವರು ಬಂದು ಕಾರ್ಯಕ್ರಮದ ಮಾಹಿತಿ ಪಡೆದಿದ್ದಾರೆ.
Comments
Post a Comment