ಬೆಳ್ತಂಗಡಿ: ರಸ್ತೆ ರಿಪೇರಿ ಸೇವಾಕಾರ್ಯ ನಡೆಸಿದ ನಡ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಬೆಳ್ತಂಗಡಿ, ಅಕ್ಟೋಬರ್ 21: ನಡ ಗ್ರಾಮದ ಗಾಂಧಿನಗರ ರಸ್ತೆಯಲ್ಲಿ ಬಹಳ ಗುಂಡಿಗಳು ಇದ್ದುದರಿಂದ ವಾಹನ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗುತಿತ್ತು. ದ್ವಿಚಕ್ರ ವಾಹನ ಸಂಚಾರಕ್ಕೆ ಬಹಳ ತೊಂದರೆ ಎದುರಾಗುತ್ತಿತ್ತು.
ಇದನ್ನು ಗಮನಿಸಿದ ವಿಪತ್ತು ನಿರ್ವಹಣೆ ನಡ ಘಟಕದ ಸ್ವಯಂಸೇವಕರಾದ ಮಂಜುನಾಥ್ , ಕಾರ್ತಿಕ್, ಉಮೇಶ್, ಒಲ್ವಿನ್ ಡಿಸೋಜ ಇವರು ರಸ್ತೆಯ ಹೊಂಡಗಳಿಗೆ ಕಲ್ಲು ಮಣ್ಣುಗಳನ್ನು ಹಾಕಿ ಸರಿಪಡಿಸಿರುತ್ತಾರೆ.
ನೀರು ನಿಲ್ಲದಂತೆ, ಸರಾಗವಾಗಿ ಹರಿದು ಹೋಗುವಂತೆ ಇಕ್ಕೆಲಗಳಲ್ಲಿ ಕಾಲುವೆ ಮಾಡಿರುತ್ತಾರೆ.
ಸ್ವಯಂಸೇವಕರ ಈ ಸೇವಾಕಾರ್ಯದಿಂದ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತೆ ಆಗಿದೆ. ಇವರ ಸೇವಾ ಕಾರ್ಯಕ್ಕೆ ಎಲ್ಲ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ:
ವಸಂತಿ
ಸಂಯೋಜಕಿ
ವಿಪತ್ತು ನಿರ್ವಹಣಾ ಘಟಕ
ನಡ/ಕನ್ಯಾಡಿ
Comments
Post a Comment