ಹೊನ್ನಾವರ: ಅರಣ್ಯ ಇಲಾಖೆಯ ಸಹಾಯದಿಂದ ಹೆಬ್ಬಾವನ್ನು ತೆರವುಗೊಳಿಸಿದ ತೆಂಗಿನಗುಂಡಿ ಘಟಕದ ಸ್ವಯಂಸೇವಕ.
ಭಟ್ಕಳ, ಅಕ್ಟೋಬರ್ 22: ತಾಲೂಕಿನ ಜಾಲಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸದಸ್ಯರಾದ ವಿವೇಕಾನಂದ ಅವರ ಮನೆಯ ಹತ್ತಿರ ಹೆಬ್ಬಾವು ಕಾಣಿಸಿಕೊಂಡಿದ್ದು
ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಮೂಡಿಸಿತ್ತು.
ಸ್ಥಳೀಯ ಮನೆಯ ಸದಸ್ಯರ ಆತಂಕವನ್ನು ಗಮನಿಸಿದ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ಶ್ರೀಕಾಂತ ನಾಯ್ಕ Ex Armi ಇವರು ನೀಡಿದ ಸಲಹೆಯಂತೆ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ವಿಪತ್ತು ನಿರ್ವಹಣೆ ಸದಸ್ಯರಾದ ವಿವೇಕಾನಂದರ ಸಹಕಾರದೊಂದಿಗೆ ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ.
ಯಶಸ್ವಿ ಹೆಬ್ಬಾವು ಕಾರ್ಯಾಚರಣೆ ಬಗ್ಗೆ ಮಾಹಿತಿ ತಿಳಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ವಲಯದ ಮೇಲ್ವಿಚಾರಕರಾದ ಭರತ್ ನಾಯ್ಕ, ವಿಪತ್ತು ನಿರ್ವಹಣೆ ಸಂಘಟಕರಾದ ಮಾದೇವ ನಾಯ್ಕ ತೆಂಗಿನಗುಂಡಿ, ಹಾಗೂ ಊರಿನ ಜನ ಹರ್ಷ ವ್ಯಕ್ತ ಪಡಿಸಿದ್ದಾರೆ.
ವರದಿ:
ಮಾದೇವ ನಾಯ್ಕ
ಸಂಯೋಜಕ
ವಿಪತ್ತು ನಿರ್ವಹಣೆ ಘಟಕ, ತೆಂಗಿನಗುಂಡಿ.
Comments
Post a Comment