ಬೆಳ್ತಂಗಡಿ: ಕೊಕ್ಕಡ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ.
ಬೆಳ್ತಂಗಡಿ, ಅಕ್ಟೋಬರ್ 24: ನವರಾತ್ರಿ ಸಂದರ್ಭದಲ್ಲಿ ಶಾರದಾ ಪೂಜೆಯ ಮುನ್ನಾ ದಿನವಾದ ಇಂದು, ಅರಸಿನ ಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರು ಸ್ವಚ್ಚತಾ ಕಾರ್ಯ ನಡೆಸಿದರು.
ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಅರಸಿನ ಮಕ್ಕಿ ಇದರ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡ ಇವರ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಇವರೊಂದಿಗೆ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಸತೀಶ್ ಶೆಟ್ಟಿ ಗುತ್ತು, ಭಾಸ್ಕರ್ ಶೆಟ್ಟಿ, ಶಿವಪ್ರಸಾದ್ ಉದ್ಯಾರೆ, ಧೀಕ್ಷಿತ ಗೌಡ ಉದ್ಯಾರೆ, ರಾಮಣ್ಣ ನಾಯ್ಕ್, ಕಿಶೋರ್ ಗೌಡ, ಸುರೇಂದ್ರ ಬೂಡ್ಡ ಮುಗೇರು, ಅಶೋಕ್ ಕುಲಾಲ್ ( ರಿಕ್ಷಾ ಚಾಲಕರು ), ಕಿಶೋರ್ ಶೆಟ್ಟಿ ಭಾಗವಹಿಸಿದ್ದರು.
ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ಸೇವಾಕಾರ್ಯ ಸಂಘಟಿಸಿದರು.
ಹತ್ಯಡ್ಕ ಸೇವಾಪ್ರತಿನಿಧಿ ಶ್ರೀಮತಿ ರೂಪಾ ಶ್ರಮದಾನಕ್ಕೆ ಸಹಕಾರ ನೀಡಿದರು.
ವರದಿ:
ಗಿರಿಜಾ, ಎಸ್.
ಸಂಯೋಜಕಿ,
ವಿಪತ್ತು ನಿರ್ವಹಣೆ ಘಟಕ,
ಕೊಕ್ಕಡ/ಶಿಶಿಲ.
Comments
Post a Comment