ಕಾರವಾರ: ಬೈಕ್ ಅಪಘಾತ: ಶೀಘ್ರ ಸ್ಪಂದಿಸಿ ಚಿಕಿತ್ಸೆ ಕೊಡಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕಿ.

   ( ಕಾರವಾರ ಘಟಕದ ಸ್ವಯಂಸೇವಕಿ ಅನು ಠಕ್ಕರ್)

ಕಾರವಾರ, ಅಕ್ಟೋಬರ್ 28: ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರಿಬ್ಬರು ಬೈಕ್ ನಿಂದ ಬಿದ್ದು ಗಂಭೀರ ವಾಗಿ ಗಾಯಗೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

ಹಣ್ಣು ಹಂಪಲುಗಳನ್ನು ಖರೀದಿಸಲೆಂದು ಮಾರುಕಟ್ಟೆಗೆ ಬಂದಿದ್ದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿಯಾದ ಅನು ಠಕ್ಕರ್ ಅವರು  ಹಣ್ಣುಗಳನ್ನು ಖರೀದಿಸುತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿರುವುದನ್ನು ಕಂಡು  ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಿದ್ದಾರೆ.

ಕಾರೊಂದು ಗೋವಾದಿಂದ ಬರುತಿತ್ತು. ವೇಗವಾಗಿ ಸಂಚರಿಸುತ್ತಿದ್ದ ಕಾರಿನ ಪಾರ್ಶ್ವಕ್ಕೆ  ತಾಗಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಹುಡುಗಿಯರು ರಸ್ತೆ ಮಧ್ಯೆ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದರು.

 ತಕ್ಷಣ ಸ್ಪಂದಿಸಿದ ಸಂಯೋಜಕಿ ತನ್ನ ದ್ವಿಚಕ್ರ ವಾಹನದಲ್ಲಿಯೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ವೈದ್ಯರಲ್ಲಿ ಮನವಿ ಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

ಇಬ್ಬರೂ ಹುಡುಗಿಯರನ್ನು ಆಸ್ಪತ್ರೆಗೆ ಸೇರಿಸಿ ಅವರ ಪೋಷಕರು ಆಸ್ಪತ್ರೆಗೆ ಬಂದ ಮೇಲೆ ತಮ್ಮ ಮನೆಗೆ ಹಿಂದಿರುಗಿದ್ದಾರೆ.

ಕರೋನ ಕಾರಣದಿಂದ ಸಹಾಯಕ್ಕಾಗಿ ಧಾವಿಸುವ ಮಂದಿ ಬಹಳ ಅಪರೂಪ. ತಾವು ನಮಗೆ ಸಹಾಯ ಮಾಡದಿದ್ದರೆ ಬಹಳ ತೊಂದರೆ ಆಗುತ್ತಿತ್ತು ಎಂದು ಅಪಘಾತದಲ್ಲಿ ತೊಂದರೆಗೆ ಒಳಗಾದ ಈರ್ವರು ಅಭಿನಂದನೆ ಸಲ್ಲಿಸಿದ್ದಾರೆ.

ಸಕಾಲದಲ್ಲಿ ನೆರವು ನೀಡಿ ಮಾನವೀಯತೆ ಮೆರೆದ ವಿಪತ್ತು ನಿರ್ವಹಣೆ ಸಂಯೋಜಕಿ ಅನು ಅವರ ಸೇವಾಕಾರ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.

Comments