ಅಂಕೋಲಾ: ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಜಾನುವಾರನ್ನು ತೆರವುಗೊಳಿಸಿ ದಫನ ಮಾಡಿದ ವಿಪತ್ತು ನಿರ್ವಹಣೆ ಅವರ್ಸಾ ಘಟಕದ ಸ್ವಯಂಸೇವಕರು.
ಅಂಕೋಲಾ, ಅಕ್ಟೋಬರ್ 25: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಜಾನುವಾರೊಂದು ವೇಗವಾಗಿ ಚಲಿಸುತ್ತಿರುವ ಲಾರಿಗೆ ಅಡ್ಡಲಾಗಿ ಸಿಲುಕಿ ಮರಣ ಹೊಂದಿದ ದುರ್ಘಟನೆ ಅಂಕೋಲಾ, ಅವರ್ಸಾ ಮಧ್ಯೆ ಹಟ್ಟಿಕೇರಿ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಮರಣ ಹೊಂದಿದ ಎಮ್ಮೆಯು ರಸ್ತೆಯಲ್ಲಿ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ವಾಹನ ಸವಾರರು ಮರಣ ಹೊಂದಿದ ಜಾನುವಾರಿನ ಕಳೆಬರವನ್ನು ನೋಡಿ ಮುಂದುವರಿಯುತ್ತಿದ್ದರೇ ವಿನಹ ತೆರವುಗೊಳಿಸುವ ಆಲೋಚನೆ ಮಾಡುತ್ತಿರಲಿಲ್ಲ.
ಇಂದು ಬೆಳಿಗ್ಗೆ ವಿಷಯ ತಿಳಿದ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಅವರ್ಸಾ ಘಟಕದ ಸಂಯೋಜಕ ಗಣಪತಿ ನಾಯ್ಕ್ ಅವರು ತಮ್ಮ ಘಟಕದ ಸ್ವಯಂಸೇವಕ ಶಿವಾ ಅವರ ಗಮನಕ್ಕೆ ತಂದಿದ್ದಾರೆ.
ಇಬ್ಬರೂ ಜೊತೆಯಾಗಿ ಜಾನುವಾರಿನ ಕಳೆಬರ ತೆರವುಗೊಳಿಸಲು ನಿರ್ಧರಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಇವರು ನಿರ್ವಹಿಸುತ್ತಿರುವ ಕಾರ್ಯವನ್ನು ಗಮನಿಸಿದ ಸ್ಥಳೀಯರು ತೆರವುಗೊಳಿಸಲು ಕೈಜೋಡಿಸಿದ್ದಾರೆ.
ಹತ್ತಿರದಲ್ಲಿಯೇ ಗುಂಡಿ ತೆಗೆದು ಜಾನುವಾರಿನ ಕಳೇಬರವನ್ನು ದಫನ ಮಾಡಿದ್ದಾರೆ.
ಗಣಪತಿ ನಾಯ್ಕ್ ಹಾಗೂ ಶಿವಾ ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
Comments
Post a Comment