ನವಲಗುಂದ: ವಿಜಯದಶಮಿ ಪ್ರಯುಕ್ತ ಬಾಲ ಹನುಮ ದೇವಾಲಯದ ಸ್ವಚ್ಚತಾ ಶ್ರಮದಾನ.

ನವಲಗುಂದ,  ಅಕ್ಟೋಬರ್ 25: ವಿಜಯದಶಮಿ (ದಸರಾ) ಹಬ್ಬದ ನಿಮಿತ್ತ ವಾಗಿ ನವಲಗುಂದ ತಾಲೂಕು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಬಾಲ ಹನುಮಾನ ದೇವಸ್ಥಾನದ ಸ್ವಚ್ಛತಾ ಸೇವಾಕಾರ್ಯ ನಡೆಸಿದರು.
ಬೆನ್ನೂರ ಘಟಕದ ಸ್ವಯಂಸೇವಕರಾದ ಕೋಟೇಶ್ವರ ಮೊರಬದ, ಬಸವರಾಜ ದಿಂಡಿ, ಗುರುಬಸಪ್ಪ ಮೊರಬದ ಇವರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 

ದೇವಾಲಯದ ಆವರಣ, ನಾಮ ಫಲಕ, ಸುತ್ತಮುತ್ತಲಿನ ಆವರಣದ ಸ್ವಚ್ಚತಾ ಕಾರ್ಯ ನಡೆಸಲಾಗಿದೆ.
 ಹಬ್ಬದ ಸಂಭ್ರಮದ ಜೊತೆಗೆ ಸೇವೆ ನೀಡಿದ ತೃಪ್ತಿ ತಮಗೆ ಇನ್ನಷ್ಟು ಧನ್ಯತಾ ಭಾವ ಮೂಡುಸಿದೆ ಎಂದು ಸ್ವಯಂಸೇವಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ:

ಕೋಟೇಶ
ಸ್ವಯಂಸೇವಕ
ವಿಪತ್ತು ನಿರ್ವಹಣಾ ಘಟಕ, ನವಲಗುಂದ

Comments