ಬೆಳ್ತಂಗಡಿ: ನೀರು ಸೇದುವಾಗ ಬಾವಿಗೆ ಬಿದ್ದು ಮುಳುಗಿದ ಮಾಂಗಲ್ಯ ಸರವನ್ನು ತೆಗೆದು ಕೊಟ್ಟ ಮುಳುಗು ತಜ್ಞ ಹರೀಶ್.
ಬೆಳ್ತಂಗಡಿ, ಬೆಳಾಲು /ಉಜಿರೆ 07: ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ಹರೀಶ್ ಹಾಗೂ ಸಂತೋಷ ಇವರು ಬೆಳಾಲು ಕೋಲ್ಪಡಿ ಡ್ಡೋಂಬಯ್ಯ ಗೌಡ ಇವರ ಮಗಳ ಮಾಂಗಲ್ಯ ತಾಳಿ ನೀರು ಸೇದುವಾಗ ಹಗ್ಗಕ್ಕೆ ತಾಗಿ ತುಂಡಾಗಿ ಬಾವಿಗೆ ಬಿದ್ದಿರುವುದನ್ನು ತೆಗೆದುಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಬಾವಿಗೆ ಬಿದ್ದಿರುವ ಸರವನ್ನು ತೆಗೆದುಕೊಡುವಂತೆ ಬೆಳಾಲು ಘಟಕದ ಈಜುಗಾರ ಹರೀಶ್ ಇವರಿಗೆ ಕರೆ ಮಾಡಿ ತಿಳಿಸಿದರು.
ಹರೀಶ್ ಅವರು ಸ್ವಯಂಸೇವಕರಾದ ಸಂತೋಷ ಇವರಿಗೆ ತಿಳಿಸಿ, ಇಬ್ಬರೂ ಕೂಡಲೇ ಸ್ಥಳಕ್ಕೆ ಧಾವಿಸಿ ನೆರವಾಗಿರುತ್ತಾರೆ.
ಹರೀಶ್ ಇವರು ಬಾವಿಗೆ ಇಳಿದು ಮಾಂಗಲ್ಯವನ್ನು ಮಹಿಳೆಗೆ ನೀಡಿ ಸಹಕರಿಸಿದರು.
ಸ್ವಯಂಸೇವಕರ ಸೇವಾಕಾರ್ಯದಿಂದ ಮನೆಯವರು ತುಂಬಾ ಸಂತೋಷ ದಿಂದ ಅವರನ್ನು ಅಭಿನಂದಿಸಿದರು.
ವರದಿ:
ಆಶಾ
ಸಂಯೋಜಕಿ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಬೆಳಾಲು/ ಉಜಿರೆ ಘಟಕ
Comments
Post a Comment