ಸುಳ್ಯ: ಗ್ರಾಮ ಪಂಚಾಯತಿ ಭೇಟಿ ಮಾಡಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಸುಳ್ಯ, ನವೆಂಬರ್ 07: ವಿಪತ್ತು ನಿರ್ವಹಣೆ ಸೇವಾ ಘಟಕ ಸುಬ್ರಹ್ಮಣ್ಯ ದ ಸ್ವಯಂಸೇವಕರು ಇಂದು ಕೊಲ್ಲಮೊಗ್ರು ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಭೇಟಿ ಮಾಡಿ ವಿಪತ್ತು ನಿರ್ವಹಣಾ ಘಟಕದ ಕುರಿತು ಮಾಹಿತಿ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ರವಿಚಂದ್ರ ಏ ಅವರನ್ನು ಭೇಟಿ ಮಾಡಿ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಬಗ್ಗೆ, ಇದುವರೆಗೆ ನಿರ್ವಹಿಸಿದ ಸೇವಾಕಾರ್ಯದ ಬಗ್ಗೆ, ಘಟಕ ರಚನೆಯ ಉದ್ದೇಶದ ಬಗ್ಗೆ ವಿವರಣೆ ನೀಡಿದರು.
ವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಸತೀಶ್ T N, ಸ್ವಯಂಸೇವಕರಾದ ಕುಸುಮಾಧರ ಪಿ, ಚಂದ್ರಶೇಖರ ಟಿ, ಸದಾಶಿವ ಕಟ್ಟ, ಚಂದ್ರಶೇಖರ ಕೊನಡ್ಕ, ಯಶವಂತ ಕಾಜೀಮಡ್ಕ, ಅಶೋಕ ಮಿತ್ತೊಡಿ, ಲಕ್ಷ್ಮಣ ಐನೆಕ್ಕಿದು, ಮಣಿಕಂಠ ಕಟ್ಟ, ಬಾಲಸುಬ್ರಹ್ಮಣ್ಯ, ಕುಶಾಲಪ್ಪ ಜಾಳುಮನೆ ಭೇಟಿ ನೀಡಿದ ತಂಡದಲ್ಲಿ ಇದ್ದರು.
ವರದಿ:
ಬಾಲಸುಬ್ರಹ್ಮಣ್ಯ
ಸ್ವಯಂಸೇವಕ
ವಿಪತ್ತು ನಿರ್ವಹಣೆ ಘಟಕ
ಸುಬ್ರಹ್ಮಣ್ಯ.
Comments
Post a Comment