ಹೊನ್ನಾವರ: ಖರ್ವಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ.
ಹೊನ್ನಾವರ, ನವೆಂಬರ್ 10: ಖರ್ವಾ ವಲಯದ ಜಲವಳ್ಳಿ ಕರ್ಕಿ ಶ್ರೀ ಶಿವಮ್ಮ ಯಾನೆ ದುರ್ಗಾದೇವಿ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮ ಎಲ್ಲ ಸ್ವಯಂ ಸೇವಕರ ಒಪ್ಪಿಗೆ ಇಂದ ಇಂದು ನೆರೆವೇರಿಸಲಾಯಿತು.
ದೇವಸ್ಥಾನದ ಸಮಿತಿಯ
ಸದಸ್ಯರು, ಅಧ್ಯಕ್ಷರು, ಮುಕ್ತೇಸರು
ದೇವಸ್ಥಾನದ ಕಮಿಟಿಯ ಸದಸ್ಯರಾದ
ಶ್ರೀ ಮಾರುತಿ ನಾಯ್ಕ ಮುಕ್ತೇಸರು, ಶ್ರೀ ಸುಬ್ರಮಣ್ಯ ವ್ಯೆದ್ಯ ಅಧ್ಯಕ್ಷರು, ಶ್ರೀ ಭಾಸ್ಕರ್ ಮೇಸ್ತ ಉಪಾಧ್ಯಕ್ಷರು, ಮೋಹನ್ ನಾಯ್ಕ ಕಾರ್ಯದರ್ಶಿ, ಶ್ರೀ ಗಜಾನನ ನಾಯ್ಕ ಸಹ ಕಾರ್ಯದರ್ಶಿ, ಶ್ರೀ ಮಂಜುನಾಥ್ ನಾಯ್ಕ ಸದಸ್ಯರು, ಲಂಬೋದರ ನಾಯ್ಕ ಮಾಜಿ. ಪ. ಅಧ್ಯಕ್ಷರು ಶ್ರೀ ರಾಮನಾಥ ನಾಯ್ಕ ಊರ ಪ್ರಮುಖರು, ಶ್ರೀ ರಾಜೇಶ್ ಪೂಜಾರಿ ಅರ್ಚಕರು, ಮಾರುತಿ ಪೂಜಾರಿ ಅರ್ಚಕರು ಉಪಸ್ಥಿತರಿದ್ದು ಪ್ರೇರಣೆ ನೀಡಿದರು.
ವಿಪತ್ತು ನಿರ್ವಹಣೆಯ ಸಂಯೋಜಕಿ ಪೂರ್ಣಿಮಾ ಅವರು ಹಾಗೂ ಸ್ವಯಂಸೇವಕರಾದ ಮಾದೇವ, ಗೋವಿಂದ, ಪರಮೇಶ್ವರ್, ಯೋಗೇಶ್, ಮಂಜುಳಾ, ಗಣೇಶ್, ನೇತ್ರಾವತಿ, ದಾಕ್ಷಾಯಿಣಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಎಲ್ಲರೂ ಸೇರಿ ದೇವಸ್ಥಾನದ ಸುತ್ತ ಮುತ್ತಲು ಸ್ವಚ್ಚಗೊಳಿಸಿ ಹಾಗೂ ಗುಂಡಿ ಬಿದ್ದ ಜಾಗಕ್ಕೆ ಮಣ್ಣು ತುಂಬುವ ಕೆಲಸ ಮಾಡಲಾಯಿತು.
ವರದಿ
ಸಂಯೋಜಕಿ
ಪೂರ್ಣಿಮಾ
ಖರ್ವಾ ಘಟಕ
Comments
Post a Comment