ನವಲಗುಂದ: ಮೊರಬ ಘಟಕದಿಂದ ರಸ್ತೆಯ ತಿರುವಿನಲ್ಲಿ ಅಪಾಯಕಾರಿ ಗಿಡಗಂಟಿಗಳ ಸ್ವಚ್ಚತಾ ಕಾರ್ಯಕ್ರಮ.

ನವಲಗುಂದ, ನವೆಂಬರ್ 08: ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ನವಲಗುಂದ ತಾಲ್ಲೂಕಿನ ಮೊರಬ ಘಟಕದ ಸಂಯೋಜಕರಾದ ಬಸವಂತಪ್ಪ ಕರಿಸೀರೆ   ಸ್ವಯಂ ಸೇವಕರಾದ   ಆಸಿಫ್ ಮುನವಳ್ಳಿ ಮಹೇಶ್ ಗೋಡಿಕಟ್ಟಿ ಮಲ್ಲಿಕಾರ್ಜುನ ಕೌಳಿಕಾಯಿ ಈರಪ್ಪ ರೌಡ್ಗಿ     ಇವರುಗಳು ಮೊರಬ ಶಿರಕೋಳ ರೋಡಿನ ತಿರುವಿನಲ್ಲಿರುವ ಗಿಡಗಂಟಿಗಳ ಸ್ವಚ್ಚತಾ ಕಾರ್ಯವನ್ನು ಮಾಡಿದರು.

ರಸ್ತೆಯಲ್ಲಿ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ಸ್ವಚ್ಛತಾ ಕಾರ್ಯ ಮಾಡಿರುವುದು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.

Comments