ಗೋಕಾಕ್: ಒಡೆದ ಪೈಪ್ ಲೈನ್ ಸರಿಪಡಿಸಿ ನೀರು ಪೋಲಾಗುವುದನ್ನು ತಪ್ಪಿಸಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಗೋಕಾಕ, ನವೆಂಬರ್ 09: ತಾಲೂಕಿನ ಕೊಳವಿ ಗ್ರಾಮದ ದೇವಸ್ಥಾನದ ಹತ್ತಿರ ಒಂದು ಸಣ್ಣ ಪೈಪ್ ಕಟ್ ಆಗಿದ್ದು ಅದನ್ನು ಸರಿಪಡಿಸಲು ಖರ್ಚಾದ ಒಟ್ಟು ಮೊತ್ತ rs.70.
ಆದರೆ ಆ ಪೈಪ್ಲೈನ್ ಒಡೆದಿರುವ ಕಾರಣದಿಂದ ಆದಂತಹ ಸಮಸ್ಯೆ ತೀರಾ ದೊಡ್ಡದು.
ಅದೇನೆಂದರೆ ಗ್ರಾಮದಲ್ಲಿ ನಿರ್ಮಿಸಿರುವ ಶೌಚಾಲಯಗಳಿಗೆ ಈ ಪೈಪ್ಲೈನ್ ಮುಖಾಂತರವೇ ನೀರು ಪೂರೈಕೆಯಾಗಬೇಕು. ಆದರೆ ನೀರು ಪೂರೈಕೆಯಾಗದೇ ಇರುವ ಕಾರಣದಿಂದ ಸುಮಾರು ನಾಲ್ಕು ದಿನದಿಂದ ಮಹಿಳೆಯರಿಗೆ ಶೌಚಾಲಯಕ್ಕೆ ಹೋಗಲು ತುಂಬಾ ಸಮಸ್ಯೆಯಾಗುತ್ತಿತ್ತು.
ಪ್ರತಿದಿನ ಬರುವಂತೆ ಶೌಚಾಲಯಕ್ಕೆ ಬಂದು ನೀರು ಇಲ್ಲದಿರುವುದನ್ನು ಗಮನಿಸಿ ಮತ್ತೆ ಮನೆಗೆ ಹೋಗಿ ನೀರು ತಂದು ಶೌಚಗೃಹ ಬಳಸಬೇಕಾಗಿತ್ತು. ಸುಮಾರು ನಾಲ್ಕು ದಿನ ಕಳೆದ ನಂತರ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಆನಂದ ಹಟ್ಟಿಗೌಡರ ಅವರ ಗಮನಕ್ಕೆ ತಂದ ಮಹಿಳೆಯರು ಸಮಸ್ಯೆಯ ಕುರಿತು ತಿಳಿಸಿದರು.
ಆಕ್ಷಣವೇ ಸಮಸ್ಯೆಗೆ ಸ್ಪಂದಿಸಿದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಆನಂದ ಹಟ್ಟಿಗೌಡರ ಹಾಗೂ ಸದಸ್ಯರಾದ ಮಲಗೌಡ ಪಾಟೀಲ ಇವರು ಸಮಸ್ಯೆಯನ್ನು ಬಗೆಹರಿಸಿ ನೀರು ಪೂರೈಕೆ ಮಾಡಿದರು.
ವರದಿ:
ಆನಂದ್ ಹಟ್ಟಿಗೌಡರ್
ಸ್ವಯಂಸೇವಕ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಗೋಕಾಕ್
Comments
Post a Comment