ಗುರುವಾಯನಕೆರೆ: ರುದ್ರಭೂಮಿಯಲ್ಲಿನ ಗಿಡಗಳ ಪೋಷಣೆಯ ನಿಮಿತ್ತ ಗಿಡಗಳ ಬುಡಕ್ಕೆ ಸೊಪ್ಪುಗಳನ್ನು ಹಾಕಿ ಬುಡ ಬಿಡಿಸಿಕೊಟ್ಟ ಮಡಂತ್ಯಾರು ಘಟಕದ ಸ್ವಯಂಸೇವಕರು.

ಗುರುವಾಯನಕೆರೆ, ನವೆಂಬರ್ 08: ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ ಮಡಂತ್ಯಾರು ವತಿಯಿಂದ ಕುಕ್ಕಳ ಗ್ರಾಮದ ಮಂಜಲಪಲ್ಕೆ ಹಿಂದೂ ರುದ್ರಭೂಮಿಯಲ್ಲಿ ಮಾಸಿಕ ಸಭೆಯ ದಿನದಂದು ನಾಟಿ ಮಾಡಿದ ನೂರಕ್ಕೂ ಅಧಿಕ ಗಿಡಗಳ ಸಂರ್ವಕ್ಷಣೆ ನಿಮಿತ್ತ ಸೇವಾಕಾರ್ಯವನ್ನು ಇಂದು ನಡೆಸಲಾಯಿತು.

ಪ್ರತಿಯೊಂದು ಗಿಡಗಳ ಸುತ್ತಲೂ ಬುಡ ಬಿಡಿಸಿಕೊಟ್ಟು ಸೊಪ್ಪುಗಳನ್ನು ಕಡಿದು ಬುಡಗಳಿಗೆ ಹಾಕಲಾಯಿತು.
ಕೆಲವು ಗಿಡಗಳು ಸತ್ತು ಹೋಗಿದ್ದು ಆ ಸ್ಥಳದಲ್ಲಿ ಬೇರೆ ಗಿಡಗಳನ್ನು ನಾಟಿ ಮಾಡಲಾಯಿತು.

ಕುಕ್ಕಳ ಗ್ರಾಮದ ಮಂಜಲಪಲ್ಕೆ ಹಿಂದೂ ರುದ್ರಭೂಮಿಯಲ್ಲಿ ಅಗಸ್ಟ್ 29 ರಂದು ಗುರುವಾಯನಕೆರೆ ವಿಪತ್ತು ನಿರ್ವಹಣಾ ತಂಡದ ಮಾಸಿಕ ಸಭೆಯ ನಿಮಿತ್ತ ಗಿಡ ನಾಟಿ ಮಾಡಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ. ಎಲ್.ಎಚ್.ಮಂಜುನಾಥ್ ಅವರು ಹಲಸಿನ ಗಿಡ ಹಾಗೂ ಕುಂಕುಮ ಗಿಡವನ್ನು ನಾಟಿ ಮಾಡುವ ಮೂಲಕ ಮಾಸಿಕ ಶ್ರಮದಾನಕ್ಕೆ ಚಾಲನೆ ನೀಡಿದ್ದರು.

ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸ್ವಪ್ರೇರಣೆಯಿಂದ ಸೇವಾಕಾರ್ಯಕ್ಕೆ ಹಾಜರಾಗಿ ಗಿಡಗಳನ್ನು ನಾಟಿ ಮಾಡಿದ್ದರು.
ಘಟಕದ ಸ್ವಯಂಸೇವಕರು ನೆಟ್ಟು  ಬೆಳೆಸಿದ ಗಿಡಗಳಿಗೆ ಸೊಪ್ಪು ಹಾಕುವ, ಬುಡ ಬಿಡಿಸಿಕೊಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್  ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್,  ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್, ಸದಸ್ಯರಾದ ಶ್ರೀ ಧರ್ಣಪ್ಪ ಗೌಡ, ಸಂಯೋಜಕರಾದ ಶ್ರೀ ಸತೀಶ್ ಆಚಾರ್ಯ, ಸ್ವಯಂಸೇವಕರಾದ ಶ್ರೀ ಭರತ್ ಕುಮಾರ್, ಲಕ್ಷ್ಮಣ ಉರ್ಲಾ ಉಪಸ್ಥಿತರಿದ್ದರು.

ವರದಿ:

ಸತೀಶ್ ಆಚಾರ್ಯ
ಸಂಯೋಜಕ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಮಡಂತ್ಯಾರು ಘಟಕ

Comments