ಭಟ್ಕಳ: ರಕ್ತದಾನ ಮಾಡಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.
ಭಟ್ಕಳ- ನವಂಬರ 08: ಭಟ್ಕಳದಲ್ಲಿ ಇಂದು ನಡೆದ ರಕ್ತದಾನ ಶಿಬಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಶ್ರೀ ಶ್ರೀಕಾಂತ ನಾಯ್ಕ , ನಿವ್ರತ್ತ ಸೈನಿಕರು ಭಟ್ಕಳ ಹಾಗೂ ಶ್ರೀ ವಿವೇಕಾನಂದ ನಾಯ್ಕ, ಇವರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಹಲವಾರು ಜನರು ರಕ್ತದಾನ ಮಾಡುವಂತೆ ಪ್ರೆರೇಪಣೆ ನೀಡಿದ್ದಲ್ಲದೇ ಸ್ವತಃ ತಾವು ರಕ್ತದಾನ ಮಾಡಿದ್ದಾರೆ.
ಇವರ ಈ ಕಾರ್ಯಕ್ಕೆ ತಾಲೂಕು ವೈದ್ಯಾಧಿಕಾರಿಗಳಾದ ಡಾ! ಸವಿತಾ ಕಾಮತ್, ಪೋಲೀಸ ಅಧಿಕಾರಿಗಳು,ಸಂಘ-ಸಂಸ್ಥೆಯ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಟ್ಕಳ ವಲಯದ ಮೇಲ್ವಿಚಾರಕರಾದ ಶ್ರೀ ಭರತ್ ನಾಯ್ಕ, ಭಟ್ಕಳ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಮಾದೇವ ನಾಯ್ಕ ತೆಂಗಿನಗುಂಡಿ,ಇವರು ವಿಪತ್ತುನಿರ್ವಹಣಾ ಸದಸ್ಯರಾದ ಶ್ರೀ ಶ್ರೀಕಾಂತ ನಾಯ್ಕ ಹಾಗು ಶ್ರೀ ವಿವೇಕಾನಂದ ನಾಯ್ಕ ಇವರಿಗೆ ಹಾಗು ಇವರ ಕುಟುಂಬಕ್ಕೆ ಶ್ರೀಮಂಜುನಾಥ ಸ್ವಾಮೀಯ ಕ್ರಪೆ ಸದಾ ಇರಲಿ ಎಂದು ಶುಭ ಹಾರೈಸಿದ್ದಾರೆ.
Comments
Post a Comment