ಉಡುಪಿ: ಜಿಲ್ಲೆಯ ನಾಲ್ಕು ತಾಲ್ಲೂಕಿನ ವಿಪತ್ತು ನಿರ್ವಹಣಾ ಸಂಯೋಜಕರಿಗೆ ಮೊದಲ ಹಂತದ ತರಬೇತಿ.

ಉಡುಪಿ, ನವೆಂಬರ್ 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್  (ರಿ) ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರ, ಉಡುಪಿ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕು ವತಿಯಿಂದ ಇಂದು  ವಿಪತ್ತು ನಿರ್ವಹಣೆ ಸಂಯೋಜಕರ ತರಬೇತಿಯನ್ನು  ಆಯೋಜಿಸಲಾಗಿತ್ತು.

ಜಿಲ್ಲೆಯ ಮಾನ್ಯ ನಿರ್ದೇಶಕರಾದ  ಶ್ರೀ ಗಣೇಶ್ ಬಿ ಸರ್  ಮಾಹಿತಿ ಮಾರ್ಗದರ್ಶನ ಮಾಡಿದರು.

ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನಚಂದ್ರ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಕುರಿತು ತರಬೇತಿ ನೀಡಿದರು.

ಕುಂದಾಪುರ  ಯೋಜನಾಧಿಕಾರಿ ಮುರುಳೀಧರ್ ಶೆಟ್ಟಿ, ಬೈಂದೂರು ಯೋಜನಾಧಿಕಾರಿ  ಶಶಿರೇಖಾ, ಕರಾವಳಿ ಪ್ರಾದೇಶಿಕ  ಕಛೇರಿಯ ಯೋಜನಾಧಿಕಾರಿ ನಾಗೇಶ್ ಉಪಸ್ಥಿತರಿದ್ದರು.

Comments