ಕುಂದಗೋಳ: ವಿಪತ್ತು ನಿರ್ವಹಣಾ ಘಟಕಕ್ಕೆ ಸ್ವಯಂಸೇವಕರ ಆಯ್ಕೆಗೆ ಸಮಾಲೋಚನೆ ಸಭೆ.

ಕುಂದಗೋಳ, ನವೆಂಬರ್ 07: ರಾಷ್ಟ್ರೀಯ ವಿಪತ್ತು ನಿರ್ವಹಣೆ  ಘಟಕಕ್ಕೆ ಸದಸ್ಯರ ಆಯ್ಕೆ ಕುರಿತು ಸಮಾಲೋಚನೆ ಸಭೆಯನ್ನು ನಡೆಸಲಾಯಿತು.

 ಪ್ರಾಕೃತಿಕವಾಗಿ ವಿಕೋಪಗಳು ಅಥವಾ ಇತರೆ ಕಾರಣಗಳಿಂದ ವಿಪತ್ತುಗಳು ಉಂಟಾದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಹಾಗೂ ತುರ್ತು ಸೇವೆ ನೀಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಕಾರ್ಯಕ್ರಮ ಆರಂಭಿಸಿದೆ. 

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಅದರಗುಂಚಿ  ವಲಯ  ವಿಪತ್ತು  ನಿರ್ವಹಣಾ ಘಟಕಕ್ಕೆ  ಇವತ್ತಿನ ಸಭೆಯಲ್ಲಿ ಹತ್ತು ಮಂದಿ ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದರು.


ಭಾಗವಹಿಸಿದ ಎಲ್ಲಾ ಸದಸ್ಯರೂ ಘಟಕಕ್ಕೆ ಹೆಸರು ನೋಂದಾಯಿಸಲು ಒಪ್ಪಿರುತ್ತಾರೆ.

ರಾಜೇಶ್ವರಿ ಬಾಗೇವಾಡಿ
ಸಂಯೋಜಕಿ
ವಿಪತ್ತು ಘಟಕ ಅದರಗುಂಚಿ
ಕುಂದಗೋಳ ತಾಲೂಕು  

Comments