ಕುಮಟಾ: ನದಿ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಕೊಡ್ಲಗದ್ದೆ ವಿಪತ್ತು ನಿರ್ವಹಣಾ ತಂಡ.

ಕುಮಟಾ, ನವೆಂಬರ್ 09: ಕೊಡ್ಲಗದ್ದೆ ಜನರು ಕುಡಿಯಲು, ವ್ಯವಸಾಯಕ್ಕೆ, ದಿನನಿತ್ಯ ಬಳಕೆಗೆ ಹೊಳೆ ನೀರು ಆಶ್ರಯಿಸಿದ್ದಾರೆ. ಅದೇ ನಮ್ಮ ಊರಿಗೆ ಗಂಗೆಮಾತೆ.

ಕೆಲವು ವರ್ಷದಿಂದ ಗಂಗೆಪೂಜೆ ಮಾಡಬೇಕು ಎಂದುಕೊಂಡಿದ್ದೆವು. ಆದ್ರೆ ಇದುವರೆಗೂ ಆಗಿರಲಿಲ್ಲ. ಆದರೆ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಂದ ಊರು ಜನರಿಗೆ ನಾಳೆ ಪೂಜೆ ಮಾಡುವ ಕುರಿತು ಹೇಳಿ, ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿರುತ್ತೇವೆ.

ಸ್ವಯಂಸೇವಕರಾದ ಗುರುರಾಜ್, ಸುನೀಲ್, ಸಂಯೋಜಕರಾದ ಮಾರುತಿ ಸ್ಥಳವನ್ನು ಸ್ವಚ್ಛತೆಯಲ್ಲಿ ಮಾಡುವಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇದೆ ಎಂದು ಊರು ಜನರು ಪ್ರೋತ್ಸಾಹ ಮಾಡಿದ್ದಾರೆ.

ವರದಿ:

ಮಾರುತಿ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ
ಕೊಡ್ಲಗದ್ದೆ, ಕುಮಟಾ

Comments