ಸೋಮವಾರ ಪೇಟೆ: ಶಾಲೆಯ ಮೈದಾನ ಸ್ವಚ್ಚತಾ ಕಾರ್ಯ ನಡೆಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.
ಸೋಮವಾರಪೇಟೆ, ನವೆಂಬರ್ 10: ರಾಷ್ಟ್ರೀಯ ವಿಪತ್ತು ನಿರ್ವಹಣೆ ಘಟಕದ ಸಂಯೋಜಕರು ಮತ್ತು ಸ್ವಯಂಸೇವಕರ ತಂಡದವರು ಇಂದು ದೊಡ್ಡಮಳ್ತೆ ಗ್ರಾಮದ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.
ಶಾಲೆಯ ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ದೊಡ್ಡಮಳ್ತೆ A ಓಕ್ಕೂಟದ ಸೇವಾಪ್ರತಿನೀಧಿಯ ತಂಡ ದಿಂದ ನಡೆಸಿದ ಕಾರ್ಯ ಇದಾಗಿದ್ದು ಮೇಲ್ವಿಚಾರಕರಾದ ರವಿಪ್ರಸಾದ್ ಅವರು ತಂಡಕ್ಕೆ ಪ್ರೇರಣೆ ನೀಡಿದರು. ವಿಪತ್ತು ನಿರ್ವಹಣಾ ಸಂಯೋಜಕ ರವಿ ಉಪಸ್ಥಿತರಿದ್ದರು.
Comments
Post a Comment